Dr. Murugesh R Nirani (@NiraniMurugesh) header
Dr. Murugesh R Nirani (@NiraniMurugesh) profile picture

• State VP, BJP Karnataka • VP, All India Veerashaiva Mahasabha (State Unit) • Former Minister for Industries & Mines, GoK • Former MLA, Bilagi

India
Joined January 2021
Photo by Dr. Murugesh R Nirani (@NiraniMurugesh)Photo by Dr. Murugesh R Nirani (@NiraniMurugesh)Photo by Dr. Murugesh R Nirani (@NiraniMurugesh)Photo by Dr. Murugesh R Nirani (@NiraniMurugesh)Photo by Dr. Murugesh R Nirani (@NiraniMurugesh)Photo by Dr. Murugesh R Nirani (@NiraniMurugesh)Photo by Dr. Murugesh R Nirani (@NiraniMurugesh)Photo by Dr. Murugesh R Nirani (@NiraniMurugesh)Photo by Dr. Murugesh R Nirani (@NiraniMurugesh)Photo by Dr. Murugesh R Nirani (@NiraniMurugesh)
ಸತ್ಯದ ಧ್ವನಿಯಾಗಿ, ಸಮಾಜದ ಕನ್ನಡಿಯಾಗಿ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತಿರುವ ಪತ್ರಿಕಾರಂಗದ ಸೇವೆ ಅನನ್ಯ. ಭಾರತೀಯ ಪತ್ರಿಕಾ ಮಂಡಳಿ ಸ್ಥಾಪನೆಯ ಈ ಸ್ಮರಣೀಯ ದಿನದಂದು, ಸಮಸ್ತ ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #NationalPressDay #ರಾಷ್ಟ್ರೀಯಪತ್ರಿಕಾದಿನಾಚರಣೆ
1
111
ಹುಬ್ಬಳ್ಳಿಯ ಬಿಜೆಪಿ ಕಾರ್ಯಾಲಯದಲ್ಲಿಂದು ರಾಜ್ಯ ಉಸ್ತುವಾರಿ ಶ್ರೀ ಹರೀಶ್ ದ್ವಿವೇದಿ ಜೀ ನೇತೃತ್ವದಲ್ಲಿ ನಡೆದ ಧಾರವಾಡ ವಿಭಾಗದ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸಿದೆನು. ಈ ವೇಳೆ ಶ್ರೀ ಪ್ರೊ. ಎಂ. ನಾಗರಾಜ್, ಶ್ರೀ ಪಿ. ರಾಜೀವ್, ಶಾಸಕರು, ಎಂಎಲ್‌ಸಿಗಳು, ಜಿಲ್ಲಾ ಹಾಗೂ ಮಂಡಲ ಅಧ್ಯಕ್ಷರು ಉಪಸ್ಥಿತರಿದ್ದರು. #BJP #MurugeshNirani
3
140
ಬೆಳಗಾವಿಯಲ್ಲಿ ಎಬಿವಿಪಿ ವಿಭಾಗದ ನೂತನ "ಸ್ವರಾಜ್ಯ" ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು. ಈ ವೇಳೆ ಶ್ರೀ ಮಂಗೇಶ ಭೇಂಡೆ, ಶ್ರೀ ಅರವಿಂದರಾವ್ ದೇಶಪಾಂಡೆ, ಶ್ರೀ ಎಸ್. ಬಾಲಕೃಷ್ಣ, ಶ್ರೀ ಹರೀಶ್ ದ್ವಿವೇದಿ ಜೀ, ಶ್ರೀ ಜಗದೀಶ್ ಶೆಟ್ಟರ್, ಶ್ರೀ ಸಂಜಯ ಪಾಟೀಲ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. #ABVP
1
101
ಬೆಳಗಾವಿಯ ಐಟಿಸಿ ವೆಲ್‌ಕಮ್ ಹೋಟೆಲ್‌ನಲ್ಲಿಂದು ರಾಜ್ಯ ಬಿಜೆಪಿ ಉಸ್ತುವಾರಿ ಶ್ರೀ ಹರೀಶ್ ದ್ವಿವೇದಿ ಜೀ ನೇತೃತ್ವದಲ್ಲಿ ನಡೆದ ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಮಾಜಿ ಹಾಗೂ ಹಾಲಿ ಸಂಸದರು, ಸಚಿವರು, ಶಾಸಕರು, ಎಂಎಲ್‌ಸಿಗಳು, ಪ್ರಮುಖರು ಉಪಸ್ಥಿತರಿದ್ದರು. #BJP #Belagavi #MurugeshNirani
2
134
ಬುಡಕಟ್ಟು ಸಮುದಾಯಗಳ ಪರವಾಗಿ ಬ್ರಿಟೀಷರ ವಿರುದ್ಧ ಹೋರಾಡಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯಂದು ಶತ ಶತ ನಮನಗಳು. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದ ಗೌರವಾರ್ಥ ನವೆಂಬರ್‌ 15 ನ್ನು ಜನಜಾತೀಯ ಗೌರವ ದಿನವನ್ನಾಗಿ ಆಚರಿಸಲಾಗುತ್ತದೆ. #BirsaMunda #JanjatiyaGauravDivas
90
ಖಾಸಗಿ ಕಾರ್ಯಕ್ರಮಕ್ಕೆ ತೆರಳುವಾಗ ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನಲ್ಲಿಂದು ಸಂಸದ ಶ್ರೀ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ ಉಪಹಾರ ಕೂಟ ನಡೆಸಿದೆನು. ಸಂಸದ ಶ್ರೀ ನಾರಾಯಣಸಾ ಭಾಂಡಗೆ, ಶಾಸಕ ಶ್ರೀ ಅರವಿಂದ ಬೆಲ್ಲದ, ಮಾಜಿ ಶಾಸಕ ಶ್ರೀ ಎ.ಎಸ್. ಪಾಟೀಲ ನಡಹಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. #Hubballi
4
231
ಅದ್ಭುತ ರನ್‌ಚೇಸ್ ಮೂಲಕ ಅಮೋಘ ಪ್ರದರ್ಶನ ನೀಡಿದ ನಮ್ಮ ಯುವ ‘ಮೆನ್ ಇನ್ ಬ್ಲೂ’ ತಂಡವು #MensU19AsiaCup ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ ಯುವ ಚಾಂಪಿಯನ್ಸ್‌ಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಪರಿಶ್ರಮ ಮತ್ತು ಗೆಲ್ಲುವ ಛಲ ದೇಶದ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯಾಗಿದೆ.
93
ಹುಬ್ಬಳ್ಳಿಯ ವಿದ್ಯಾನಗರದ ಮೃತ್ಯುಂಜಯ ಬಡಾವಣೆಯಲ್ಲಿರುವ ಪ್ರೊ. ಎಂ.ಆರ್. ಪಾಟೀಲ ಹಾಗೂ ಪ್ರೊ. ಲಲಿತಾ ಎಂ. ಪಾಟೀಲ ದಂಪತಿಗಳ ನೂತನ ನಿವಾಸದ ಗೃಹಪ್ರವೇಶ ಹಾಗೂ ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆನು. (1/2)
1
213
ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದ ಸಮಾರಂಭದಲ್ಲಿ ಪ್ರೊ. ಎಂ. ನಾಗರಾಜ್, ಶ್ರೀ ಎಸ್. ವಿ. ಸಂಕನೂರ, ಶ್ರೀ ಲಿಂಗರಾಜ ಪಾಟೀಲ, ಶ್ರೀಮತಿ ಜ್ಯೋತಿ ಪಾಟೀಲ ಹಾಗೂ ಶ್ರೀ ರಘು ಅಕಮಂಚಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. (2/2)
10
ಸಂಘಟನೆಯೇ ಶಕ್ತಿ, ಜನಸೇವೆಯೇ ಗುರಿ ಬೆಂಗಳೂರಿನಲ್ಲಿಂದು ರಾಜ್ಯ ಉಸ್ತುವಾರಿ ಶ್ರೀ ಹರೀಶ್ ದ್ವಿವೇದಿ, ಸಹ ಉಸ್ತುವಾರಿ ಡಾ. ಕಸಮ್ ವೆಂಕಟೇಶ್ವರುಲು ಹಾಗೂ ರಾಜ್ಯಾಧ್ಯಕ್ಷ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಬಲವರ್ಧನೆ ಕುರಿತು ಸಲಹೆಗಳನ್ನು ಹಂಚಿಕೊಂಡೆನು.
1
115
ಸಂಘಟನಾ ಚತುರರು, ಪಕ್ಷದ ನಿಷ್ಠಾವಂತ ನಾಯಕರು, ಮಾಜಿ ಕೃಷಿ ಸಚಿವರು ಹಾಗೂ ಆತ್ಮೀಯರಾದ ಶ್ರೀ @bcpatilkourava ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ರೈತಪರ ಕಾಳಜಿ ಮತ್ತು ಜನಪರ ಕಾರ್ಯಗಳ ಮೂಲಕ ನಾಡಿನ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ನಿಮಗೆ ಭಗವಂತನು ಉತ್ತಮ ಆಯುರಾರೋಗ್ಯ ಹಾಗೂ ಜನಸೇವೆ ಮಾಡುವ ಶಕ್ತಿ ಕರುಣಿಸಲಿ.
1
84
ಇಂದಿನ ಮಕ್ಕಳೇ ನಾಳಿನ ಸದೃಢ, ಸಮೃದ್ಧ ಭಾರತದ ನಿರ್ಮಾತೃಗಳು. ಮಕ್ಕಳ ಮುಗ್ಧ ಕನಸುಗಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಸಂಸ್ಕಾರ ಮತ್ತು ಸೂಕ್ತ ವೇದಿಕೆಯನ್ನು ಒದಗಿಸುವ ಮೂಲಕ ಅವರ ಉಜ್ವಲ ಭವಿಷ್ಯವನ್ನು ರೂಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾಡಿನ ಸಮಸ್ತ ಮುದ್ದು ಚಿಣ್ಣರಿಗೆ ಮಕ್ಕಳ ದಿನಾಚರಣೆಯ ಹೃತ್ಪೂರ್ವಕ ಶುಭಾಶಯಗಳು.
1
94
ಭರಪೂರ ಕೊಡುಗೆಗಳನ್ನು ಕರ್ನಾಟಕಕ್ಕೆ ನೀಡಲು ಆಗಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರಿಗೆ ರಾಜ್ಯಕ್ಕೆ ಆತ್ಮೀಯ ಸುಸ್ವಾಗತ! #KarnatakaWelcomesPMModi
1
2
159
ಕರುನಾಡಿನ ಅಭಿವೃದ್ಧಿಯ ಪಯಣಕ್ಕೆ ಮತ್ತಷ್ಟು ವೇಗ ನೀಡಲು ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸುತ್ತಿರುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರಿಗೆ ಹೃತ್ಪೂರ್ವಕ ಸ್ವಾಗತ. #KarnatakaWelcomesPMModi
1
2
111
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿಯಲ್ಲಿ ಇದುವರೆಗೆ ₹4.47 ಲಕ್ಷ ಕೋಟಿ ರೂ. ಮೌಲ್ಯದ ಆರ್ಥಿಕ ಸಹಾಯವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ.ಈ ಮಧ್ಯವರ್ತಿ ಮುಕ್ತ ನೆರವು ರೈತರು ಆರ್ಥಿಕ ಶಕ್ತಿ ಮತ್ತು ಆತ್ಮನಿರ್ಭರತೆಯನ್ನು ಸಾಧಿಸಲು ಸಹಾಯ ಮಾಡುತ್ತಿದೆ. ಅನ್ನದಾತರಿಗೆ ಗೌರವ - ಸಮೃದ್ಧ ಭಾರತದ ಗುರುತು #ViksitBharat
1
67
ನಾಡಿನ ಅಭಿವೃದ್ಧಿಯ ಹರಿಕಾರ, ಸಂಘಟನಾ ಚತುರ, ಮಾಜಿ ಕೇಂದ್ರ ಸಚಿವ ದಿವಂಗತ ಶ್ರೀ ಅನಂತಕುಮಾರ್ ಅವರ ಪುಣ್ಯಸ್ಮರಣೆಯಂದು ಆ ಮಹಾನ್ ಚೇತನಕ್ಕೆ ಅನಂತ ನಮನಗಳು. ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಮತ್ತು ನಾಡಿನ ಪ್ರಗತಿಗೆ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ. ಅವರ ಜನಪರ ಚಿಂತನೆಗಳು ನಮಗೆಲ್ಲರಿಗೂ ನಿತ್ಯ ಪ್ರೇರಣೆ. 💐 #AnanthKumar
2
96
ದೇಶದ ಪ್ರಗತಿಗೆ ಮತ್ತು ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ನಿಜವಾದ ಶಕ್ತಿ! ಜ್ಞಾನದ ಅನ್ವೇಷಣೆ, ಸತ್ಪ್ರಜೆಗಳ ನಿರ್ಮಾಣ ಮತ್ತು ಸಮಾಜದ ಸಬಲೀಕರಣಕ್ಕೆ ಶಿಕ್ಷಣವೇ ಮೂಲಾಧಾರ. ಪ್ರತಿಯೊಂದು ಮಗುವಿಗೂ ಅಕ್ಷರ ಕಲಿಯುವ ಹಕ್ಕು ಸಿಗಲಿ, ಜ್ಞಾನದ ಹಾದಿಯಲ್ಲಿ ನಮ್ಮ ದೇಶ ಸದಾ ಮುನ್ನಡೆಯಲಿ. ಸಮಸ್ತ ಜನತೆಗೆ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಶುಭಾಶಯಗಳು.
72
ಕನ್ನಡ ನಾಡಿನ ಶೌರ್ಯದ ಇತಿಹಾಸವನ್ನು ಬರೆದ ವೀರಮಾತೆಯ ಸ್ಮರಣೆ! ✨🚩 ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ, ಒನಕೆಯನ್ನೇ ಅಸ್ತ್ರವಾಗಿಸಿ ಕೋಟೆಯ ಕಿಂಡಿಯಿಂದ ನುಗ್ಗಿದ ಶತ್ರುಗಳನ್ನು ಏಕಾಂಗಿಯಾಗಿ ಸದೆಬಡಿದ ಸ್ವಾಭಿಮಾನದ ಪ್ರತೀಕ, ವೀರವನಿತೆ ಒನಕೆ ಓಬವ್ವ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.
1
83
ನಾಡಿನ ಸಮಸ್ತ ಜನತೆಗೆ ಬಲಿಪಾಡ್ಯಮಿ ಹಬ್ಬದ ಶುಭಾಶಯಗಳು.🙏 ತ್ಯಾಗ-ಧರ್ಮದ ಪ್ರತೀಕವಾದ ಬಲಿಚಕ್ರವರ್ತಿಯ ಸ್ಮರಣೆ ಹಾಗೂ ವಾಮನ ಮೂರ್ತಿಯ ಕೃಪೆಯ ಪವಿತ್ರ ದಿನವಿದು. ಈ ದೀಪಾವಳಿಯ ದಿವ್ಯ ಬೆಳಕು ನಿಮ್ಮ ಮನೆಯ ಕತ್ತಲನ್ನು ದೂರವಾಗಿಸಿ, ರೈತ ಬಾಂಧವರ ಬಾಳಿನಲ್ಲಿ ಸಮೃದ್ಧಿ ತರಲಿ. ಎಲ್ಲರ ಬದುಕಿನಲ್ಲೂ ಸುಖ, ಶಾಂತಿ ನೆಲೆಸಲಿ. #ಬಲಿಪಾಡ್ಯಮಿ
101
ಸಮಸ್ತ ದೇಶವಾಸಿಗಳಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಳನ್ನು ಕೋರಿದ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ! 🪔✨ #HappyDeepavali #PMModi
1
4
172