ದೀಪಕ್ .ಕೆ (@Deepak_ka10) header
ದೀಪಕ್ .ಕೆ (@Deepak_ka10) profile picture

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. - ಕುವೆಂಪು 💛❤️

Karnataka
Joined January 2022
Photo by ದೀಪಕ್ .ಕೆ (@Deepak_ka10)Photo by ದೀಪಕ್ .ಕೆ (@Deepak_ka10)Photo by ದೀಪಕ್ .ಕೆ (@Deepak_ka10)Photo by ದೀಪಕ್ .ಕೆ (@Deepak_ka10)Photo by ದೀಪಕ್ .ಕೆ (@Deepak_ka10)Photo by ದೀಪಕ್ .ಕೆ (@Deepak_ka10)Photo by ದೀಪಕ್ .ಕೆ (@Deepak_ka10)Photo by ದೀಪಕ್ .ಕೆ (@Deepak_ka10)Photo by ದೀಪಕ್ .ಕೆ (@Deepak_ka10)Photo by ದೀಪಕ್ .ಕೆ (@Deepak_ka10)
ಕರ್ನಾಟಕ ರಾಜ್ಯದ ಲಾಂಛನದಲ್ಲಿ ಹಿಂದಿ ಭಾಷೆಗೇಕೆ ಸ್ಥಾನ? ನಮ್ಮ ರಾಜ್ಯದ ಭಾಷೆ ಕನ್ನಡ. ಆದ್ದರಿಂದ ರಾಜ್ಯದ ಲಾಂಛನದಲ್ಲಿ ಕನ್ನಡಕ್ಕೆ ಆದ್ಯತೆ ನೀಡಿ. 💛❤️ #ಹಿಂದಿಹೇರಿಕೆನಿಲ್ಲಿಸಿ @DKShivakumar @KDA_Bengaluru #stophindiimposition #Kannada #Karnataka #Bengaluru
33
ಕಾರ್ಮಿಕರ ವಸತಿ ಯೋಜನೆಗೆ ಹಿಂದಿ ಹೆಸರು ಏಕೆ? ಖಾಸಗಿ ಕಂಪನಿಗಳ ಜೇಬಿಗೆ ಜನರ ತೆರಿಗೆ ಹಣ ಏಕೆ? ಕರ್ನಾಟಕ ಸರ್ಕಾರ ಘೋಷಿಸಿರುವ 'ಶ್ರಮಿಕ್ ನಿವಾಸ್' ಯೋಜನೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೃಹತ್ ಕೈಗಾರಿಕೆಗಳ ಸಚಿವ ಎಂ. ಬಿ. ಪಾಟೀಲ್ ಅವರ ಹೇಳಿಕೆಯನ್ನು ಗಮನಿಸಿದರೆ ಕರ್ನಾಟಕದಲ್ಲಿ ಇರುವುದು ಕನ್ನಡಿಗರ ಸರ್ಕಾರವೋ ಅಥವಾ ಹಿಂದಿಯನ್ನರ ಸರ್ಕಾರವೋ ಎಂಬ ಅನುಮಾನ ಮೂಡುತ್ತದೆ. ಮೊದಲನೆಯದಾಗಿ, ಕರ್ನಾಟಕ ಸರ್ಕಾರಕ್ಕೆ ಕನ್ನಡದ ಹೆಸರೇ ಸಿಗಲಿಲ್ಲವೇ? ಹಿಂದಿ ಹೆಸರೇ ಬೇಕಿತ್ತೆ ಕರ್ನಾಟಕದಲ್ಲಿ ಜಾರಿಗೊಳಿಸುವ ಯೋಜನೆಗೆ 'ಶ್ರಮಿಕ್ ನಿವಾಸ' ಎಂಬ ಹಿಂದಿ ಹೆಸರಿಡುವ ಅಗತ್ಯವೇನಿತ್ತು? ಈ ಹೆಸರು ಕೇಳಿದ ತಕ್ಷಣ ಇದು ಹಿಂದಿ ಭಾಷಿಕ ರಾಜ್ಯಗಳಿಂದ ಕರ್ನಾಟಕಕ್ಕೆ ವಲಸೆ ಬರುವ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯೇ ಎಂಬ ಪ್ರಶ್ನೆ ಮೂಡುತ್ತದೆ. ಕನ್ನಡಿಗರ ಅನುಕೂಲಕ್ಕೆ ಈ ಯೋಜನೆ ರೂಪುಗೊಂಡಿದ್ದರೆ 'ಶ್ರಮಜೀವಿಗಳ ನೆಲೆ', 'ಶ್ರಮಜೀವಿಗಳ ಮನೆ' ಅಥವಾ 'ಕಾರ್ಮಿಕರ ವಸತಿ ಯೋಜನೆ' ಎಂಬ ಸರಳವಾದ ಕನ್ನಡ ಹೆಸರುಗಳನ್ನು ಇಡುತ್ತಿದ್ದರು. ಇದು ಹಿಂದಿಯನ್ನರ ಅನುಕೂಲಕ್ಕೆ ಮಾಡಿರುವ ಯೋಜನೆ. ಅದಕ್ಕೆ ಹಿಂದಿ ಹೆಸರೇ ಇಟ್ಟಿದ್ದಾರೆ. ಎರಡನೆಯದಾಗಿ, ಖಾಸಗಿ ಕಂಪನಿಗಳ ಕ್ಯಾಂಪಸ್‌ನಲ್ಲಿ ಮನೆ ಕಟ್ಟಲು ಜನರ ತೆರಿಗೆ ಹಣವನ್ನು ಯಾಕೆ ಬಳಸಬೇಕು? ಸರ್ಕಾರದ ಪ್ರಸ್ತಾಪದ ಪ್ರಕಾರ, 100 ಕಾರ್ಮಿಕರಿಗೆ ವಸತಿ ಕಲ್ಪಿಸುವ ಕಂಪನಿಗೆ ಒಂದು ಕೋಟಿ ರೂಪಾಯಿ, 1,000 ಕಾರ್ಮಿಕರಿಗೆ ಹತ್ತು ಕೋಟಿ ರೂಪಾಯಿ ಹಾಗೂ 2,500 ಕಾರ್ಮಿಕರಿಗೆ 25 ಕೋಟಿ ರೂಪಾಯಿಗಳವರೆಗೆ ಸಹಾಯಧನ ನೀಡಲು ಉದ್ದೇಶಿಸಲಾಗಿದೆ. ಯಾರ ದುಡ್ಡು ಕೊಡುತ್ತಿದ್ದೀರಿ? ಯಾವ ಉದ್ದೇಶಕ್ಕೆ ಕೊಡುತ್ತಿದ್ದೀರಿ? ಎಂಬಿ ಪಾಟೀಲರು ತಮ್ಮ ಸ್ವಂತ ಹಣವನ್ನೇನಾದರೂ ಖರ್ಚು ಮಾಡುತ್ತಿದ್ದಾರಾ? ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡಲು ಇವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ಅಥವಾ ಸಂಸ್ಥೆಗಳು ಸಚಿವರಿಗೆ ಏನಾದರೂ ಕಮಿಷನ್ ಕೊಡುತ್ತವೆಯೇ? ದಶಕಗಳಿಂದ ಕರ್ನಾಟಕದ ಭೂಮಿ, ನೀರು, ವಿದ್ಯುತ್, ರಸ್ತೆ, ಮೂಲಸೌಕರ್ಯ ಮತ್ತು ವಿವಿಧ ರಿಯಾಯಿತಿಗಳನ್ನು ಬಳಸಿಕೊಂಡು ಬೃಹತ್ ಉದ್ಯಮಗಳನ್ನು ಕಟ್ಟಿಕೊಂಡಿರುವ ಕಂಪನಿಗಳಿಗೆ ತಮ್ಮ ಉದ್ಯೋಗಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವ ಯೋಗ್ಯತೆ ಇಲ್ಲವೇ? ಅವು ದಿವಾಳಿ ಆಗಿವೆಯೇ? ಸರ್ಕಾರವೇ ಕಡಿಮೆ ಬೆಲೆಗೆ ಭೂಮಿ ಒದಗಿಸಿ, ತೆರಿಗೆ ರಿಯಾಯಿತಿ ನೀಡಿ, ನಾನಾ ಸೌಲಭ್ಯಗಳನ್ನು ಕಲ್ಪಿಸಿರುವ ಕಂಪನಿಗಳಿಗೆ ತಮ್ಮದೇ ಕ್ಯಾಂಪಸ್‌ನಲ್ಲಿ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡುವ ಆರ್ಥಿಕ ಸಾಮರ್ಥ್ಯ ಇಲ್ಲವೇ? ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಮಾಡಬೇಕಾದ ಮೂಲಭೂತ ಸೌಕರ್ಯದ ವೆಚ್ಚವನ್ನೂ ಸರ್ಕಾರದ ಹೆಗಲಿಗೆ ಏರಿಸುವುದಾದರೆ, ಈ ಕಂಪನಿಗಳಿಗೆ ಕನಿಷ್ಟ ಸಾಮಾಜಿಕ ಜವಾಬ್ದಾರಿಯೂ ಇಲ್ಲವೇ? ಒಂದು ಕಂಪನಿಗೆ 25 ಕೋಟಿ ರೂಪಾಯಿಗಳವರೆಗೆ ಸಹಾಯಧನ ನೀಡುವಾಗ ಸರ್ಕಾರ ಯಾವ ಮಾನದಂಡ ಅನುಸರಿಸುತ್ತದೆ? ಈಗಾಗಲೇ ಕಂಪನಿಗಳಿಗೆ ನೀಡಿರುವ ಭೂಮಿ ಮತ್ತು ರಿಯಾಯಿತಿಗಳ ಲೆಕ್ಕವೇನು? ನಿರ್ಮಿಸುವ ಮನೆಗಳ ಮಾಲೀಕತ್ವ ಯಾರದ್ದು? ಕಾರ್ಮಿಕರಿಗೆ ನಿಜವಾಗಿಯೂ ಉಚಿತವಾಗಿ ಅಥವಾ ಕೈಗೆಟುಕುವ ಬಾಡಿಗೆಗೆ ವಸತಿ ಸಿಗುತ್ತದೆಯೇ? ಈ ಪ್ರಮಾಣದಲ್ಲಿ ಖಾಸಗಿ ಸಂಸ್ಥೆಗಳ ಸೇವೆ ಮಾಡುತ್ತಿರುವ ಸರ್ಕಾರಕ್ಕೆ ಇದೇ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗದ ಪ್ರಮಾಣ ಎಷ್ಟು ಎಂದು ಕೇಳುವ ಎದೆಗಾರಿಕೆ ಇಲ್ಲ. ಮಾಹಿತಿ ತೆಗೆದುಕೊಳ್ಳುವ ಶಕ್ತಿಯೂ ಇಲ್ಲ. ಉದ್ಯಮ ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗ ಕೊಡುತ್ತೇವೆ ಎಂಬ ವಾಗ್ದಾನ ನೀಡಿ, ಸರ್ಕಾರ ರೈತರಿಂದ ಭೂಸ್ವಾಧೀನ ಮಾಡಿಕೊಟ್ಟ ಅಮೂಲ್ಯ ಜಾಗವನ್ನು ಕೆಲವು ಸಂಸ್ಥೆಗಳು ರಿಯಲ್ ಎಸ್ಟೇಟ್ ದಂಧೆಗೆ ಬಳಸಿಕೊಳ್ಳುತ್ತಿವೆ. ಆದರೂ ಸರ್ಕಾರ ಜಾಣ ಮೌನ ವಹಿಸಿದೆ. ಈಗ ವಸತಿ ಯೋಜನೆ ಹೆಸರಲ್ಲಿ ದೊಡ್ಡ ಹಗರಣ ನಡೆಸಲು ಉದ್ದೇಶಿಸಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ.
15
122
3
394
7,308
ಕನ್ನಡಿಗ ರಂಜಾನ್ ಸಾಬ್ ಮೆಟ್ರೋ ನಿಲ್ದಾಣ @BZZameerAhmedK ಅವರೇ ಇದನ್ನು ಬಿಟ್ಟು ಅದೇ ಮೆಟ್ರೋ ನಿಲ್ದಾಣಕ್ಕೆ ಕನ್ನಡ ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಏಕೈಕ ಕನ್ನಡಿಗ ಬಳ್ಳಾರಿಯ ರಂಜಾನ್ ಸಾಬ್ ಅವರ ಹೆಸರಿಡಲು ದಯವಿಟ್ಟು ಮನವಿ ಮಾಡಿ. ನಿಮ್ಮ ಸಮುದಾಯದ ಸಾಕಷ್ಟು ಜನರಿಗೆ ಇವರ ಹೆಸರೇ ಗೊತ್ತಿಲ್ಲದಿರಬಹುದು.ಪರಿಶೀಲಿಸಿ @CMofKarnataka
A representation was submitted to the Hon’ble Chief Minister Shri @DKShivakumar today, requesting that the proposed Kadugondanahalli Metro Station on Namma Metro’s Pink Line be renamed “Arabic College Metro Station.” The request seeks to reflect the geographical identity and local significance of the area through an appropriate station name. Former Minister Shri @BNagendraINC and HESCOM Chairman Janab Azzam peer Khadri were present on the occasion. ನಮ್ಮ ಮೆಟ್ರೋದ ಪಿಂಕ್ ಲೈನ್‌ನಲ್ಲಿರುವ ಪ್ರಸ್ತಾವಿತ ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬದಲಾಗಿ ‘ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡುವಂತೆ ಕೋರಿ ಮಾನ್ಯ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಸ್ಥಳೀಯ ಪ್ರದೇಶದ ಐತಿಹಾಸಿಕ ಮತ್ತು ಭೌಗೋಳಿಕ ಗುರುತನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ಹೆಸರನ್ನು ಪರಿಗಣಿಸುವಂತೆ ಮನವಿಯಲ್ಲಿ ಕೋರಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಬಿ. ನಾಗೇಂದ್ರ ಹಾಗೂ ಹೆಸ್ಕಾಂ ಅಧ್ಯಕ್ಷರಾದ ಜನಾಬ್ ಅಜ್ಜಂಪೀರ್ ಖಾದ್ರಿ ಉಪಸ್ಥಿತರಿದ್ದರು. @INCKarnataka
73
47
17
403
58,541
ಕನ್ನಡದಲ್ಲಿ ನಾಮ ಫಲಕ ಹಾಕಿದ ವಿಜಯಾನಂದ ಟ್ರಾವೆಲ್ಸ್ 😍 ಮೊದಲು ಇರ್ಲಿಲ್ಲ ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಳಿದ ಮೇಲೆ ಬದಲಾವಣೆ ಆಗಿದೆ – at Bengaluru South, India
3
55
544
6,011
ದೀಪಕ್ .ಕೆ retweeted
ಹಿಂದೂ ದರ್ಮ ಕನ್ನಡವನ್ನು ಉಳಿಸುತ್ತದೆ.!! ಸರಿಯಾಗಿ ಕಣ್ಬಿಟ್ಟು ನೋಡಿ. ದರ್ಮದ ಹೆಸರಿನಲ್ಲಿ ಹಿಂದೂ, ಮುಸ್ಲಿಂ ಅಂತ ವಲಸಿಗರನ್ನು ಇನ್ನೂ ಬಿಟ್ಕೊಳ್ಳಿ, ಕನ್ನಡ - ಕನ್ನಡ ಸಂಸ್ಕೃತಿಯನ್ನು ಉತ್ತುಂಗಕ್ಕೆ ಏರಿಸ್ತಾರೆ!
32
131
1,861
ಕರ್ನಾಟಕದ ಲಾಂಛನದಲ್ಲಿ ಹಿಂದಿ ಹೇರಿಕೆ ಆಗಿದೆಯೇ? ಇಲ್ಲಿದೆ ವಾಸ್ತವ! 🔍📜 ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ರಾಜ್ಯ ಲಾಂಛನಗಳ (State Emblems) ಭಾಷಾ ಬಳಕೆಯ ಕುರಿತು ದೊಡ್ಡ ಚರ್ಚೆ ನಡೆಯುತ್ತಿದೆ. ಇದರಲ್ಲಿ ಯಾವುದು ಸರಿ? ಯಾವುದು ತಪ್ಪು? ಇಲ್ಲಿದೆ ಸಂಪೂರ್ಣ ಮಾಹಿತಿ: ೧. ಕರ್ನಾಟಕದ ಲಾಂಛನದಲ್ಲಿರುವುದು ಹಿಂದಿ! ❌ ➡️ ✅ • ಕರ್ನಾಟಕದ ಲಾಂಛನದಲ್ಲಿ (ಗಂಡಬೇರುಂಡ ಚಿತ್ರದ ಕೆಳಗೆ) ಹಿಂದಿಯಲ್ಲಿದೆ "ಸತ್ಯಮೇವ ಜಯತೆ" ಎಂದು ಬರೆಯಲಾಗಿದೆ. ಇತರ ರಾಜ್ಯಗಳ ಲಾಂಛನಗಳ ಸ್ಥಿತಿ ಸ್ಥಳೀಯ ಭಾಷೆಯಲ್ಲಿವೇ! 🏛️ ಯಾವುದು ಸರಿ✅ ?ಯಾವುದು ತಪ್ಪು? ❌🤔 ಅಂತಿಮ ಮಾತು: ಲಾಂಛನದಲ್ಲಿರುವುದು 'ಹಿಂದಿ' ಇರಬಾರದು . ಆದರೆ, ಕನ್ನಡ ನಾಡಿನ ಅಧಿಕೃತ ಮುದ್ರೆಯಲ್ಲಿ ಕನ್ನಡವೇ ಸಾರ್ವಭೌಮನಾಗಿರಬೇಕು ಎನ್ನುವ ಕನ್ನಡಿಗರ ಭಾವನೆ ಗೌರವಾರ್ಹ! ❤️💛 #Kannada #Karnataka #Identity #FactCheck #SatyamevaJayate #KarnatakaEmblem
5
32
118
2,019
ಗಾಯಕ ಸೋನು ನಿಗಮ್ ಸ್ಪಷ್ಟನೆ ನೀಡುವ ಧಾಟಿಯಲ್ಲಿ ಮತ್ತೆ ತನ್ನ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಕನ್ನಡ ಹಾಡು ಹಾಡಲು ಕೇಳಿದ್ದನ್ನೇ ಪೆಹಲ್ಗಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಕ್ಕೆ ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ. ಕಾರಣ, ಸಂದರ್ಭ ಏನೇ ಇರಲಿ, ಒಂದು ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸುವುದು, ಭಯೋತ್ಪಾದಕ ಕೃತ್ಯಗಳಿಗೆ ಒಂದು ಹಾಡಿನ ಬೇಡಿಕೆಯೇ ಕಾರಣ ಎನ್ನುವುದು ನೀಚತನದ ಪರಮಾವಧಿ. ಇದಕ್ಕೆ ಈಗ ಕಾರಣಗಳನ್ನು ಜೋಡಿಸುತ್ತ ಹೋಗುವುದೆಲ್ಲ ತೇಪೆ ಹಚ್ಚುವ ಕೆಲಸ ಅಷ್ಟೆ. ಸೋನು ಅವರಿಗೆ ಕನ್ನಡ ಮಣ್ಣಿನ ಋಣವಿದೆ. ಇಲ್ಲೇ ಅವರು ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ. ಅದಕ್ಕಿಂತ ಮಿಗಿಲಾಗಿ ಲಕ್ಷಾಂತರ ಜನರ ಬೆಲೆ ಕಟ್ಟಲಾಗದ ಪ್ರೀತಿ ಗಳಿಸಿದ್ದಾರೆ. ಆ ಪ್ರೀತಿಗೆ ದ್ರೋಹ ಎಸಗುವುದು ಎಷ್ಟು ಸರಿ ಎಂಬುದನ್ನು ಅವರು ತಮಗೆ ತಾವೇ ಕೇಳಿಕೊಳ್ಳಲಿ. ಪೆಹಲ್ಗಮ್ ದಾಳಿಗೂ ಮುನ್ನ ಕರ್ನಾಟಕದ ದಂಪತಿಗಳು ಮಾಡಿರುವ ಒಂದು ವಿಡಿಯೋ ಪೋಸ್ಟ್ ಮಾಡಿ ಸೋನು ನಿಗಮ್ ಅವರು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಆ ದಾಳಿಯ ಭೀಕರತೆ ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿ ನಾವೆಲ್ಲರೂ ಕಣ್ಣೀರಿಟ್ಟಿದ್ದೀವಿ. ಆ ದಾಳಿಯ ಭಯಾನಕತೆ ಗೊತ್ತಿರುವ ಕಾರಣಕ್ಕಾಗಿಯೇ ಸೋನು ಅವರ ಹೇಳಿಕೆಯನ್ನು ನಾವೆಲ್ಲರೂ ಅಷ್ಟು ತೀವ್ರವಾಗಿ ವಿರೋಧಿಸಿದ್ದು. ಆ ಕಾರಣಕ್ಕಾಗಿಯೇ ಸೋನು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು. ಈಗ ಅವರು ಪೆಹಲ್ಗಮ್ ದಾಳಿಯಲ್ಲಿ ಅಸು ನೀಗಿದ ಜೀವಗಳನ್ನು ಮುಂದಿಟ್ಟುಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವ ಅಗತ್ಯ ಇರಲಿಲ್ಲ. ದೇಶಭಕ್ತಿಯ ಪಾಠವನ್ನು ನಮಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಶತ ಶತಮಾನಗಳ ಕಾಲ ನಾವೇ ದೇಶವಾಗಿದ್ದೆವು. ನಮ್ಮ ನಾಡಭಕ್ತಿ ಯಾವತ್ತಿಗೂ ದೇಶ ವಿರೋಧಿಯಲ್ಲ. ಭಾಷೆಯನ್ನು ಪ್ರೀತಿಸುವುದು ದೇಶವನ್ನು ಒಡೆಯುವುದಿಲ್ಲ, ಇನ್ನಷ್ಟು ಬಲವಾಗಿ ದೇಶವನ್ನು ಕಟ್ಟುತ್ತದೆ. ದೇಶದ ಸೌಂದರ್ಯ ಇರುವುದೇ ನಮ್ಮ ವೈವಿಧ್ಯತೆಗಳಲ್ಲಿ. ದೇಶದ ಹೆಸರಲ್ಲಿ, ದೇಶಭಕ್ತಿಯ ನೆಪದಲ್ಲಿ ಈ ವೈವಿಧ್ಯತೆ ಯನ್ನು ವಿರೋಧಿಸುವುದು, ಅಪಮಾನಿಸುವುದು ನಿಜವಾದ ದೇಶದ್ರೋಹ. ಒಂದು ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಮ್ ಮಾಡಬೇಕಾದ, ಮಾಡಬಹುದಾದ ಒಂದೇ ಒಂದು ಕೆಲಸವೇನೆಂದರೆ ತಾನು ಅಪಮಾನಿಸಿದ ಜನರಿಗೆ, ಆ ಮಣ್ಣಿಗೆ ತಲೆಬಾಗಿ ಕ್ಷಮೆ ಕೋರುವುದು ಮತ್ತು ಇನ್ನೆಂದೂ ಇಂಥ ಕೃತ್ಯ ಎಸಗುವುದಿಲ್ಲ ಎಂದು ಪ್ರಮಾಣ ಮಾಡುವುದು. ಅದನ್ನು ಬಿಟ್ಟು ದೇಶಭಕ್ತಿ, ಧರ್ಮ, ಹುತಾತ್ಮ ಜೀವಗಳ ಬೆನ್ನಲ್ಲಿ ಅಡಗಿಕೊಂಡು ಸಮರ್ಥನೆಗೆ ಇಳಿಯುವುದು ನೀಚತನ. ಅದನ್ನು ಯಾರೂ ಕೂಡ ಮಾಡಬಾರದು. ಸೋನು ನಿಗಮ್ ಒಬ್ಬ ಗಾಯಕರಾಗಿ ನಮಗೆಲ್ಲರಿಗೂ ಇಷ್ಟ. ಅದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರ ಸಂಗೀತಕ್ಕೆ ಅವರ ಕೊಡುಗೆ ಅಪಾರ. ಸೋನು ಅವರನ್ನೂ ಕೂಡ ಕನ್ನಡ ಚಿತ್ರರಂಗ ಪೊರೆದಿದೆ. ಒಬ್ಬ ಗಾಯಕನಾಗಿ ಹಾಡುಗಳಿಗೆ ಜೀವ ತುಂಬುವಾಗ ಅವರು ತೋರುವ ಸೂಕ್ಷ್ಮತೆಯನ್ನೇ ಸಾರ್ವಜನಿಕ ನಡವಳಿಕೆ, ಆಡುವ ಮಾತುಗಳಲ್ಲಿ ತೋರಬೇಕು ಅನ್ನುವುದಷ್ಟೇ ನಮ್ಮ ಅಪೇಕ್ಷೆ. ಇದನ್ನು ಅವರು ಬೇಗ ಅರ್ಥ ಮಾಡಿಕೊಳ್ಳಲಿ. ಕನ್ನಡಿಗರು ಎಲ್ಲಾ ಅರ್ಥದಲ್ಲೂ ನಿಜವಾದ ದೇಶಭಕ್ತರು. ಸ್ವಾತಂತ್ರ್ಯ ಪೂರ್ವದಲ್ಲಿ, ನಂತರದಲ್ಲಿ ದೇಶಕ್ಕಾಗಿ ನಮ್ಮನ್ನು ನಾವು ತೇಯ್ದುಕೊಂಡಿದ್ದೇವೆ. ಬೇಕಾದಷ್ಟು ಕಳೆದುಕೊಂಡಿದ್ದೇವೆ. ಸೋನು ಅವರಿಗೆ ಬೇಕಿದ್ದರೆ, ಮಾಹಿತಿ ತಲುಪಿಸುತ್ತೇವೆ.
48
79
6
308
19,821
ಮಹಾರಾಷ್ಟ್ರ ನಾಡಗೀತೆಯನ್ನು ಈ ರೀತಿಯಲ್ಲಿ ಕರ್ನಾಟಕದಲ್ಲಿ ದುರ್ಗಾಮಾತಾ ದೌಡ ಹೆಸರಿನಲ್ಲಿ ಹಾಡುವುದು ಅಕ್ಷಮ್ಯ ಅಪರಾಧ ಕೂಡಲೇ ನಾಡದ್ರೋಹಿ ಕೇಸ್ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು..
18
37
19
170
42,933
ದೀಪಕ್ .ಕೆ retweeted
Dear Prime Minister Ambani, Please accept my humble apologies for not realizing that you are the real boss of India. Naturally, you would prefer to maintain your monopolistic exploitation of the great people of India, but would you nonetheless consider allowing Starlink to compete? There are many areas of India, as there are in all countries, with no Internet access, which denies children the opportunity for education and for small businesses the opportunity to sell their goods to a global market. Starlink would change their lives for the better. Thank you 🙏
101,372
71,637
28,056
547,810
118,900,560
ಕರವೇ ನೆಲಮಂಗಲ ತಾಲೂಕು ಅಧ್ಯಕ್ಷರಾದ ಮಂಜೇಗೌಡರವರ ತಂಡದಿಂದ ಬುದ್ದಿ ಹೇಳಲಾಗಿದೆ.. @karave_KRV
54
160
16
902
41,902
ಉರ್ದು ಹಿಂದಿ ಎರಡೂ ಒಂದೇ, ಕಾಂಗ್ರೆಸ್ ನವರು ಹಿಂದಿ ಹೇರಿಕೆಗೆ ಅಡಿಪಾಯ ಹಾಕಿದವರು ಇದೀಗ ಹಿಂದಿ ಹೇರಿಕೆಗೆ ಕರ್ನಾಟಕದಲ್ಲಿ ವಿರೋಧವಿರುವುದರಿಂದ ಉರ್ದು ಹೆಸರಿನಲ್ಲಿ ಒಂದು ಕಡೆ ಹಿಂದಿ/ಉರ್ದುಗೆ ಹೆಚ್ಚುಗಾರಿಕೆ ಇನ್ನೊಂದು ಕಡೆ ಮುಸ್ಮಿ ಜನರನ್ನು ಕನ್ನಡದ ಮುಖ್ಯವಾಹಿನಿಯಿಂದ ದೂರವಿರುವಂತೆ ಮಾಡಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಪ್ರತಿಯೊಬ್ಬ ಕನ್ನಡಿಗನೂ ವಿರೋಧಿಸಬೇಕಿದೆ.
55
145
6
371
11,767
Replying to @nw_krtc
@nw_krtc ಬೆಳಗಾವಿ ಅಂತ ಬರೆಯುವ ಬದಲು ಬೆಳಗಾಂವ ಅಂತ ತಪ್ಪಾಗಿ ಬರೆದಿದ್ದಾರೆ ದಯವಿಟ್ಟು ಇದನ್ನ ಸರಿಪಡಿಸಿ... @KSRTC_Journeys
8
45
5
164
4,452
Inner Line Permit ಬೇಕೇ ಬೇಕು
16
176
10
759
13,999
ದೀಪಕ್ .ಕೆ retweeted
ಉಘೇ ಉಘೇ ಮಾದಪ್ಪ 🙏 ಜೈ ಜೇನುಕಲ್ ಸಿದ್ದಪ್ಪ 🙏 ಬರೀ ಟ್ವೀಟ್ ನಲ್ಲಿ trending ಮಾಡೋದು ಅಲ್ಲ, ನಕ್ಕನ್ BMS ನಲ್ಲಿ trending ಆಗ್ಬೇಕು!!💥💥💥 #HegganaMuddu Special Premier show today, at 7:15PM , Forum Mall. #PremadaOorali #Citylights #VideoTheMovie #AmericaAmerica2 #Sandalwood #KFI
91
1
570
8,836
ಉರ್ದುವಿಗೆ ಕರ್ನಾಟಕದಲ್ಲಿ ಅಧಿಕೃತ ಸ್ಥಾನ ಕೊಡ್ಬೇಕಾ ಬೇಡ್ವಾ comments ಮೂಲಕ ತಿಳಿಸಿ #kannada #karnataka #urdu #trending #viral
8
5
1
24
914
ದೀಪಕ್ .ಕೆ retweeted
CM @DKShivakumar says Kannada activists deserve Assembly representation, citing Darshan Puttannaiah’s example. Now KARAVE should seek 10-15% seats in GBA elections. Time for meaningful representation in Bengaluru. 💛❤️
4
57
3
480
7,918
ಕನ್ನಡಪರ ಸರ್ಕಾರ ಕನ್ನಡಿಗರ ಸರ್ಕಾರ ಅಂತೆಲ್ಲ ಹೇಳುವ ಹಾಗೂ ಒಂದು ಮತವನ್ನ ಮಾತ್ರ ಓಲೈಕೆ ಮಾಡುವ @INCKarnataka ಅವ್ರು ನಿಮಗೇನಾದ್ರು ಕನ್ನಡ ಹಾಗೂ ಕನ್ನಡಿಗರ ಪರ ಒಲವು ಇದ್ದಲ್ಲಿ ಎಲ್ಲಕಡೆ ಈ ಮಸೀದಿಯ ಫಲಕಗಳಲ್ಲಿ ಉರ್ದು ತೆಗೆಯಿರಿ ಹಾಗೂ ಮಾದರಸಗಳಲ್ಲಿ ಕನ್ನಡವನ್ನು ಮೊದಲ ಭಾಷೆಯನ್ನಾಗಿ ಕಲಿಸಿ! @siddaramaiah @DKShivakumar @DKSureshINC @sstangadagi @osd_cmkarnataka #StopUrduImposition
8
57
4
140
4,119
ಕನ್ನಡ ನಾಡಿನಲ್ಲಿ ಪರನುಡಿಯ ಹೇರಿಕೆ ಕನ್ನಡಿಗರು ಸಹಿಸಲ್ಲ ಅದು ಉರ್ದು, ಮರಾಠಿ,ಹಿಂದಿ ಯಾವುದೇ ಇರಲಿ. ಕನ್ನಡ ಸಂಘಟನೆಗಳೇ ಕನ್ನಡ ನೆಲದ ಜೀವಾಳ.💛🙏❤️ #ಬೆಳಗಾವಿ_ರಾಯಣ್ಣ
8
100
11
447
17,136
ಯಾರಪ್ಪ ಈ ಮೂರ್ಖ🤦🏻‍♂️ ಪಾರ್ಲಿಮೆಂಟ್ ಅಲ್ಲಿ ಹಿಂದಿ ಮಾತಾಡೋಕೆ ಅಂತ ಇಡೀ ಕರ್ನಾಟಕ ಹಿಂದಿ ಕಲಿಬೇಕಂತೆ. ಈತ ಯಾರೋ ಹಿಂದಿಗರ ಪರ ವಹಿಸಿಕೊಂಡು ಬಂದು ಕರ್ನಾಟಕದಲ್ಲಿ ಹಿಂದಿ 3ನೇ ಭಾಷೆ ಕಲ್ಸಿ ಅಂತ ಬಂದಿದ್ದಾನೆ. ಯಾವುದೇ ಕಾರಣಕ್ಕೂ ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು. ಕರ್ನಾಟಕ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆ ಸಹಿಸೋಲ್ಲ. #ದ್ವಿಭಾಷಾನೀತಿಸಾಕು
41
89
4
432
10,676
ತೆಂಕಣ ಕನ್ನಡ, ಇದೆ ಚೆನ್ನಾಗಿದೇ @DKShivakumar
8