Minister for Commerce & Industries, Infrastructure GoK | Educationist-Engineer-Basava Literature Enthusiast

ವಿಜಯಪುರ - Vijayapura, India
Joined October 2014
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes! An incredible story of a people’s movement: 1.5 crore trees planted, raising forest cover from just 0.17% to 2%. A true testament to political will, systemic action & the power of collective participation. Proud that Vijayapura’s green success is inspiring the world! My heartfelt thanks to all the stakeholders and the people of Vijayapura. nytimes.com/card/2025/09/02/…
140
336
57
1,822
230,854
ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ
1
11
500
ಕೋಲಾರದ ವೇಮಗಲ್ ನಲ್ಲಿ ₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕ ಉದ್ಘಾಟನೆ ಈ ಯೋಜನೆಯ ಪ್ರಮುಖ ಅಂಶಗಳು: 🔹 3,000+ ಹೆಚ್ಚು ನೇರ ಉದ್ಯೋಗ ಅವಕಾಶಗಳು 🔹 ಕನಿಷ್ಠ ಶೇ.60ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆಯ ನೇಮಕಾತಿ 🔹 ಕೇವಲ 1 ವರ್ಷದ ಶರವೇಗದ ಅವಧಿಯಲ್ಲಿ ಭೂಮಿ ಹಂಚಿಕೆಯಿಂದ ಕಾರ್ಯಾರಂಭ 🔹 ಇಲ್ಲಿ ಉತ್ಪಾದನೆಯಾಗುವ ಗುಣಮಟ್ಟದ ಪೈಪ್ಗಳನ್ನು ಹೊರದೇಶಗಳಿಗೂ ರಫ್ತು ಮಾಡುವ ಗುರಿ 🔹 ನೌಕರರ ವಸತಿಗಾಗಿ ಕಂಪನಿಯಿಂದ 150 ಮನೆಗಳ ನಿರ್ಮಾಣ ಕರ್ನಾಟಕವನ್ನು ಉದ್ಯೋಗ-ಕೇಂದ್ರಿತ ಹಾಗೂ ಪರಿಸರ ಸ್ನೇಹಿ ಕೈಗಾರಿಕಾ ಅಭಿವೃದ್ಧಿಯತ್ತ ಮುನ್ನಡೆಸುವಲ್ಲಿ ಈ ಯೋಜನೆ ಮಹತ್ವದ ಮೈಲಿಗಲ್ಲಾಗಿದೆ.
2
3
19
694
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿ, ಕಬ್ಬು ಬೆಳೆಗಾರರ ಹಿತಾಸಕ್ತಿ, ಬೆಂಬಲ ಬೆಲೆ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. @CMofKarnataka @DKShivakumar @JarkiholiSatish @cheluvarayswamy @SS_Mallikarjun_ @SantoshSLadINC @LaxmanSavadi
2
21
1,207
ಕೋಲಾರದ ವೇಮಗಲ್ ನಲ್ಲಿ ₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕ ಆರಂಭ! ▶️ 3,000 ನೇರ ಉದ್ಯೋಗಗಳ ಸೃಷ್ಟಿ, ▶️ ಸ್ಥಳೀಯ ಆರ್ಥಿಕತೆಗೆ ಬಲ ▶️ ಜಗತ್ತಿನ ಅತಿ ದೊಡ್ಡ ಪರಿಸರ ಸ್ನೇಹಿ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕ ▶️ ಜಾಗತಿಕ ಮಾರುಕಟ್ಟೆಗೆ ಕರ್ನಾಟಕದ ಉತ್ಪಾದನಾ ಸಾಮರ್ಥ್ಯದ ಪರಿಚಯ. ಹೂಡಿಕೆ ಒಪ್ಪಂದಗಳು ಕಾಗದಕ್ಕೆ ಸೀಮಿತವಾಗದೆ, ಕಾರ್ಯರೂಪಕ್ಕೆ ಬರುವಂತೆ ಮಾಡುವ ನಮ್ಮ ಬದ್ಧತೆ ಅಚಲ! #PoddarPipes
9
8
2
48
2,170
ವಿಜಯಪುರ ಜಿಲ್ಲೆಯ ಯುವತಿಯರಾದ ರೂಪಾಮಾಳಿ ಹಾಗೂ ನಿಸರ್ಗ ಅವರು ಉದ್ಯೋಗ ಸಂದರ್ಶನಕ್ಕೆ ತೆರಳುತ್ತಿದ್ದ ವೇಳೆ ತುಮಕೂರು ಜಿಲ್ಲೆಯ ದಾಬಸ್ ಪೇಟೆ ಸಮೀಪ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವ ಸುದ್ದಿ ಅತ್ಯಂತ ನೋವು ತಂದಿದೆ. ತಮ್ಮ ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿಕೊಳ್ಳಲು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕನಸುಗಳನ್ನು ಹೊತ್ತು ಹೊರಟಿದ್ದ ಈ ಯುವತಿಯರ ಜೀವನ ಹೀಗೆ ಅಕಾಲಿಕವಾಗಿ ಅಂತ್ಯಗೊಂಡಿರುವುದು ಹೃದಯವಿದ್ರಾವಕ. ದುಃಖತಪ್ತ ಕುಟುಂಬದವರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ. ಮೃತ ಯುವತಿಯರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅಪಘಾತದಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ದುರ್ಘಟನೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ್ದು, ಮೃತರ ಪಾರ್ಥಿವ ಶರೀರಗಳನ್ನು ಅವರ ಸ್ವಗ್ರಾಮಗಳಿಗೆ ತಲುಪಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಹಾಗೂ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಈ ದುಃಖದ ಸಂದರ್ಭದಲ್ಲಿ ನೊಂದ ಕುಟುಂಬಗಳೊಂದಿಗೆ ನಾವೆಲ್ಲರೂ ಇದ್ದೇವೆ.
1
1
21
2,977
ಭಾಲ್ಕಿ ಹಿರೇಮಠ ಸಂಸ್ಥಾನದ ಪಟ್ಟಾಧ್ಯಕ್ಷರಾದ ಪರಮಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಪೂಜ್ಯರು ಡಾ. ಫ. ಗು. ಹಳಕಟ್ಟಿಯವರ ಪರಿಶ್ರಮದ ಫಲವಾದ ‘ಶಿವಾನುಭವ ಪತ್ರಿಕೆ - ಶತಮಾನದ ಸಮಗ್ರ ನೋಟ’ ಸಂಪುಟ ಹಾಗೂ ‘ಶರಣಲೋಕ’ ಕೃತಿಗಳನ್ನು ಆಶೀರ್ವಾದಪೂರ್ವಕವಾಗಿ ನೀಡಿದರು. 1926ರಲ್ಲಿ ಪ್ರಕಟಣೆ ಆರಂಭಿಸಿದ ಶಿವಾನುಭವ ಪತ್ರಿಕೆ ಇಂದು ಶತಮಾನದ ಸಂಭ್ರಮದಲ್ಲಿದೆ. ಈ ಐತಿಹಾಸಿಕ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ, ಡಾ. ಫ. ಗು. ಹಳಕಟ್ಟಿಯವರ ಜೀವನ ಮತ್ತು ಸಾಧನೆಗಳು ಹಾಗೂ ಶಿವಾನುಭವ ಪತ್ರಿಕೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳ ಕುರಿತು ನಾಡಿನಾದ್ಯಂತ ವಿಚಾರಗೋಷ್ಠಿಗಳು, ಸಂಕಿರಣಗಳು, ಚರ್ಚೆಗಳು ಹಾಗೂ ಚಿಂತನಕೂಟಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ, ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಬೃಹತ್ ಶತಮಾನೋತ್ಸವ ಸಮಾರಂಭ ಹಾಗೂ ಬಸವ ಜಯಂತಿಯನ್ನು ಆಚರಿಸುವ ಕುರಿತು ಪೂಜ್ಯ ಗುರುಗಳೊಂದಿಗೆ ಚರ್ಚಿಸಲಾಯಿತು. ಶರಣರ ವಚನ ಸಾಹಿತ್ಯದ ಅಮೂಲ್ಯ ಮೌಲ್ಯಗಳು, ಬಸವಣ್ಣನವರ ಸಮಾನತೆಯ ತತ್ವಗಳು ಹಾಗೂ ಮಾನವೀಯತೆಯ ಸಂದೇಶಗಳು ಮುಂದಿನ ಪೀಳಿಗೆಗಳಿಗೂ ತಲುಪಬೇಕು. ವಚನ ಸಾಹಿತ್ಯದ ಜ್ಞಾನಜ್ಯೋತಿ ಮನೆಮನೆಗೂ ತಲುಪಿ, ಶರಣ ಸಂಸ್ಕೃತಿಯ ಶ್ರೀಮಂತ ಪರಂಪರೆ ಯುಗಯುಗಾಂತರಗಳವರೆಗೆ ಬೆಳಗಲಿ. #ಶಿವಾನುಭವ
8
494
ನಾಡಿನ ನೆಲ-ಜಲದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಸಮಾಜವಾದಿ ಚಿಂತಕ, ಹಿಂದುಳಿದ ವರ್ಗಗಳ ಧೀಮಂತ ನಾಯಕ ಹಾಗೂ ಕೃಷಿ ಕಾರ್ಮಿಕರು, ರೈತರು ಮತ್ತು ಗ್ರಾಮೀಣ ಜನತೆಯ ಏಳಿಗೆಗಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಜನ್ಮದಿನದಂದು ಗೌರವದ ನಮನಗಳು. ಆಶ್ರಯ, ಆರಾಧನಾ, ಅಕ್ಷಯ ಸೇರಿದಂತೆ ಹಲವು ಜನಪರ ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯ ಹಾಗೂ ನಾಡಿನ ಸಮಗ್ರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅನನ್ಯ. ಅವರ ಜನಪರ ಚಿಂತನೆಗಳು ಹಾಗೂ ಸಮಾಜಮುಖಿ ಕಾರ್ಯಗಳು ಸದಾ ಸ್ಮರಣೀಯ. #Bangarappa
4
29
780
ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಚಿಂತನೆಗಳು ನಮ್ಮ ಹಿಂದಿನ ಪೀಳಿಗೆಗೆ ಹೋಲಿಸಿದರೆ ಇಂದಿನ ಪೀಳಿಗೆ ಸಾಕಷ್ಟು ಬದಲಾಗಿದೆ. ಇಂದಿನ ಪೀಳಿಗೆಗೆ ಹೋಲಿಸಿದರೆ ಮುಂದಿನ ಪೀಳಿಗೆ ಮತ್ತಷ್ಟು ಬದಲಾವಣೆಗಳಿಗೆ ತೆರೆದುಕೊಳ್ಳುವುದು ಸಹಜ. ಆದರೆ, ಮುಂದಿನ ಪೀಳಿಗೆಯವರು ಎಲ್ಲವನ್ನೂ ಬಿಟ್ಟುಬಿಟ್ಟಿದ್ದಾರೆ ಎಂದು ಇಂದಿನ ಹಿರಿಯರು ಬೇಸರಿಸಿಕೊಳ್ಳುವುದು ಸರಿಯಲ್ಲ. ಏಕೆಂದರೆ, ಬದಲಾವಣೆ ಎಂಬುದು ಜಗದ ನಿಯಮ! #SiddeshwaraSwamiji
1
22
721
ಆದಿಕವಿ ವಾಲ್ಮೀಕಿ ಮಹರ್ಷಿಗಳಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತಾ, ನಾಡಿನ ಸಮಸ್ತ ಜನತೆಗೆ #ವಾಲ್ಮೀಕಿಜಯಂತಿ ಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಅವರು ರಚಿಸಿದ ‘ರಾಮಾಯಣ’ ಜಗತ್ತಿನ ಮೊಟ್ಟಮೊದಲ ಮಹಾಕಾವ್ಯವಾಗಿದ್ದು, ಸತ್ಯ, ಧರ್ಮ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಅಮರ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ. ವಾಲ್ಮೀಕಿ ಮಹರ್ಷಿಗಳ ತಪೋಬಲ, ಜ್ಞಾನ ಮತ್ತು ಬೋಧನೆಗಳು ನಮ್ಮೆಲ್ಲರ ಬದುಕಿಗೆ ಸದಾ ದಾರಿದೀಪವಾಗಲಿ. #ValmikiJayanti #ಮಹರ್ಷಿವಾಲ್ಮೀಕಿ
1
34
764
ಬಸವಕಲ್ಯಾಣದ ಭಾಲ್ಕಿ ಶಾಖಾ ಮಠಕ್ಕೆ ಭೇಟಿ ನೀಡಿ, ನಾಡೋಜ ಡಾ. ಬಸವಲಿಂಗ ಪಟ್ಟದೇವರು ಮಹಾಸ್ವಾಮಿಗಳು ಹಾಗೂ ಇಳಕಲ್ಲ ಚಿತ್ತರಗಿ ಮಠದ ಪೂಜ್ಯ ಗುರುಮಹಾಂತ ಶ್ರೀಗಳನ್ನು ಭೇಟಿಯಾಗಿ, ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡೆ. ಕೆಲಕಾಲ ಶ್ರೀಮಠದಲ್ಲಿ ಪೂಜ್ಯ ಗುರುಗಳ ಸಾನ್ನಿಧ್ಯದಲ್ಲಿದ್ದು, ಅವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚಿಸಿದೆ.
3
29
951
ವಿಶ್ವಗುರು ಬಸವಣ್ಣನವರ ಕ್ರಾಂತಿಕಾರಿ ವಿಚಾರಧಾರೆ, ಶರಣರ ವಚನಗಳ ಬೆಳಕು ಹಾಗೂ ಸಮಾನತೆಯ ಆಶಯಗಳು ಪ್ರಜ್ವಲಿಸಿದ ಐತಿಹಾಸಿಕ ಕಲ್ಯಾಣ ಪರ್ವದ ರಜತ ಮಹೋತ್ಸವದ ಭವ್ಯ ಕ್ಷಣಗಳಿವು!
5
27
832
ಬಸವಾದಿ ಶರಣರು ಸಾರಿದ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಬಸವಣ್ಣನವರ ದೂರದೃಷ್ಟಿಯ ಚಿಂತನೆಗಳ ಫಲವಾಗಿ ರೂಪುಗೊಂಡ ಅನುಭವ ಮಂಟಪವು ಮುಕ್ತ ಚರ್ಚೆ, ವಿಚಾರ ವಿನಿಮಯ ಮತ್ತು ಸಮಾನತೆಯ ತತ್ವಗಳಿಗೆ ವೇದಿಕೆಯಾಗಿ, ವಿಶ್ವದ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಪ್ರಸಿದ್ಧಿ ಪಡೆದಿದೆ. ಇಂದು ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅನುಭವ ಮಂಟಪಕ್ಕೆ ಭೇಟಿ ನೀಡಿ, ಈ ಐತಿಹಾಸಿಕ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಮಹತ್ವದ ಕಾರ್ಯವನ್ನು ವೀಕ್ಷಿಸಿದೆ. #ಅನುಭವಮಂಟಪ
5
33
1,124
ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಸಾರುವ ‘ಕಲ್ಯಾಣ ಪರ್ವ’ ರಜತ ಮಹೋತ್ಸವದಲ್ಲಿ ಭಾಗಿ! ವಿಶ್ವಗುರು ಬಸವಣ್ಣನವರ ವಿಚಾರಧಾರೆ, ಶರಣರ ವಚನ ಸಾಹಿತ್ಯ ಹಾಗೂ ಸಮಾನತೆಯ ಆಶಯಗಳಿಗೆ ಸಾಕ್ಷಿಯಾದ ಐತಿಹಾಸಿಕ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿದ್ದ ಕಲ್ಯಾಣ ಪರ್ವದ ರಜತ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ಸಂತಸ ತರಿಸಿತು. ಲಿಂಗೈಕ್ಯ ಡಾ. ಮಾತೆ ಮಹಾದೇವಿಯವರ ನೇತೃತ್ವದಲ್ಲಿ 2001ರಲ್ಲಿ ಆರಂಭವಾದ ಕಲ್ಯಾಣ ಪರ್ವವು 25ನೇ ವರ್ಷಕ್ಕೆ ಕಾಲಿಟ್ಟು ರಜತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಜಾತಿ, ವರ್ಗ, ಲಿಂಗದ ಭೇದಗಳನ್ನು ಮೀರಿ ಎಲ್ಲರಿಗೂ ಸಮಾನ ಗೌರವ, ಕಾಯಕಕ್ಕೆ ಘನತೆ ಹಾಗೂ ದಾಸೋಹದ ಮೂಲಕ ಸಮಾಜದ ಒಳಿತನ್ನು ಸಾರಿದ ಬಸವಣ್ಣನವರ ಕ್ರಾಂತಿಕಾರಿ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ, ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಮುನ್ನಡೆದ ಅನುಭವ ಮಂಟಪವು ಎಲ್ಲ ವರ್ಗಗಳ ಜನರ ಆಶೋತ್ತರಗಳಿಗೆ ಧ್ವನಿಯಾದ ವೈಚಾರಿಕ ವೇದಿಕೆ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮುಕ್ತ ಚಿಂತನೆಯ ಆಶಯಗಳಿಗೆ ಭದ್ರ ಬುನಾದಿ ಹಾಕಿದ ಶರಣರ ಈ ಪರಂಪರೆ ಇಂದಿಗೂ ನಮಗೆ ದಾರಿದೀಪವಾಗಿದೆ. ಬಸವಣ್ಣನವರ ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ, ಮುಂದಿನ ಪೀಳಿಗೆಗೂ ಈ ಮಹಾನ್ ಪರಂಪರೆಯನ್ನು ಪರಿಚಯಿಸಿ, ಸಮಾನತೆ ಮತ್ತು ಸಹಬಾಳ್ವೆಯ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಮ.ನಿ. ಪ್ರ. ಮಹಾಜಗದ್ಗುರು ಡಾ. ಗಂಗಾಮಾತೆ, ಪರಮಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ವಿಧಾನಪರಿಷತ್ತಿನ ಸದಸ್ಯರುಗಳು, ಹಾಲಿ ಹಾಗೂ ಮಾಜಿ ಶಾಸಕರುಗಳು ಸ್ಥಳೀಯ ಮುಖಂಡರು, ಶರಣ ಬಂಧುಗಳು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಸವಭಕ್ತರು ಉಪಸ್ಥಿತರಿದ್ದು, ಸಮಾರಂಭದ ಮೆರಗು ಹೆಚ್ಚಿಸಿದರು. ಬಸವ ತತ್ವವೇ ಬದುಕಿನ ಬೆಳಕು; ಸಮಾನತೆಯ ಸಮಾಜವೇ ನಮ್ಮ ಸಂಕಲ್ಪ!
6
25
1,257
ಬಸವಕಲ್ಯಾಣಕ್ಕೆ ತೆರಳುತ್ತಿದ್ದಾಗ ಹುಮ್ನಾಬಾದ್‌ ಗೆ ಆಗಮಿಸಿದಾಗ ವೇಳೆ ವಿಧಾನಪರಿಷತ್ ಸದಸ್ಯರಾದ ಶ್ರೀ ಭೀಮರಾವ್ ಪಾಟೀಲ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಅವರ ಪ್ರೀತಿ, ಅಭಿಮಾನ ಹಾಗೂ ಆತ್ಮೀಯ ಸ್ವಾಗತಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು.
4
22
2,573
ಕಲ್ಯಾಣ ಪರ್ವ ರಜತ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಸವಕಲ್ಯಾಣಕ್ಕೆ ತೆರಳುತ್ತಿದ್ದಾಗ ಬೀದರ್ ಗೆ ಆಗಮಿಸಿದ ವೇಳೆ ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು. ಅವರ ಅಭಿಮಾನಕ್ಕೆ ಧನ್ಯವಾದಗಳು.
1
6
45
1,884
Investment to Impact. Proposals to Reality Poddar’s ₹1,000 crore pipe manufacturing unit in Vemagal, Kolar, inaugurated in just over a year from approval, is a testament to Karnataka’s commitment to turning investment proposals into action. With 3,000+ direct jobs and 60% local workforce, this project strengthens regional growth and creates meaningful opportunities for our people. My congratulations to the Poddar family and the entire team for the swift execution of this project. Thank you for partnering with Karnataka's growth journey and contributing to industrial progress and job creation. #PoddarPipes
4
9
1
47
2,997
ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಘಟಕಕ್ಕೆ ಚಾಲನೆ ಹೂಡಿಕೆ ಪ್ರಸ್ತಾವನೆಗಳು ಕೇವಲ ಕಾಗದದ ಮೇಲಿನ ಒಪ್ಪಂದಗಳಾಗದೆ, ಕೈಗಾರಿಕೆಗಳಾಗಿ ರೂಪುಗೊಂಡು ಉದ್ಯೋಗ ಸೃಷ್ಟಿಸಬೇಕು ಎಂಬುದೇ ನಮ್ಮ ಸಂಕಲ್ಪ! ₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್‌ ಘಟಕವು ಮಾತುಕತೆಯಿಂದ ಕಾರ್ಯರೂಪಕ್ಕೆ ಬಂದಿರುವುದು ನಮ್ಮ ಬದ್ಧತೆಗೆ ಸಾಕ್ಷಿ. ಹೂಡಿಕೆಗಳಿಗೆ ವೇಗ, ಕೈಗಾರಿಕೆಗಳಿಗೆ ಉತ್ತೇಜನ, ಯುವಜನತೆಗೆ ಉದ್ಯೋಗ-ಇದೇ ನಮ್ಮ ಆದ್ಯತೆ! #PoddarPipes
3
5
2
31
1,295
Poddar’s ₹1,000 Crore Eco-Friendly Plumbing Pipe Facility Inaugurated: 3,000 Direct Jobs Inaugurated Poddar Plumbing Systems’ new facility at Vemgal Industrial Area in Kolar district. This ₹1,000 crore investment will create 3,000 direct jobs, strengthen the local economy and manufacture quality plumbing pipes for domestic and export markets. Our government allotted land for the project on February 24, 2025, handed over the site in April and laid the foundation stone in July. Its inauguration in October 2026 demonstrates our commitment to helping investments move swiftly from approval to operations. Vemgal is emerging as a major manufacturing hub, with companies such as Krones, Airbus, Poland’s TZMO and M Zero establishing their presence. Poddar’s facility adds further momentum to this growth. The facility will also house a skill training centre. I urged the company to prioritize employment for members of land-losing families and ensure that local residents account for at least 60% of its workforce. I congratulate Chairman Shri Deepak Poddar, CEO Shri Varun Poddar, their family and the entire team on this milestone. Our commitment remains firm: investment agreements must translate into industries, jobs and opportunities for our people. #PoddarPipes
6
45
1,709
₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ ಜಗತ್ತಿನ ಅತಿ ದೊಡ್ಡ ಪರಿಸರ ಸ್ನೇಹಿ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕ! 2025ರಲ್ಲಿ ಪ್ರಸ್ತಾವನೆಗೆ ಅನುಮೋದನೆ: 2026ರ ಅಕ್ಟೋಬರ್‌ ನಲ್ಲಿ ಉದ್ಘಾಟನೆ! 3,000 ನೇರ ಉದ್ಯೋಗಗಳ ಸೃಷ್ಟಿ| ಸ್ಥಳೀಯ ಆರ್ಥಿಕತೆಗೆ ಬಲ ವೇಮಗಲ್ (ಕೋಲಾರ ಜಿಲ್ಲೆ): ಇಲ್ಲಿನ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ ಪೊದ್ದಾರ್ ಪ್ಲಂಬಿಂಗ್ ಸಿಸ್ಟಮ್ಸ್ ಉದ್ಯಮ‌ ಸಮೂಹವು ₹1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ನೂತನ ಪರಿಸರ ಸ್ನೇಹಿ ಕಾರ್ಖಾನೆಯನ್ನು ಉದ್ಘಾಟಿಸಿ, ಸಂಸ್ಥೆಯ ಅಧ್ಯಕ್ಷರು ಹಾಗೂ ಘಟಕ ಸ್ಥಾಪಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದೆ. ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಪೊದ್ದಾರ್ ಕಂಪನಿ ಸಲ್ಲಿಸಿದ್ದ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿ, 2025ರ ಫೆಬ್ರವರಿ 24ರಂದು ಜಾಗ ಹಂಚಿಕೆ ಮಾಡಿದೆವು. ಅದೇ ವರ್ಷದ ಏಪ್ರಿಲ್ ನಲ್ಲಿ ನಿವೇಶನ ಹಸ್ತಾಂತರ, ಜುಲೈನಲ್ಲಿ ಶಂಕುಸ್ಥಾಪನೆ ಮಾಡಿದೆವು. ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಈ ಸಂಕೀರ್ಣ ಕಾರ್ಯಾರಂಭ ಮಾಡಿದೆ. ಇದು ನಮ್ಮ ಕೈಗಾರಿಕಾಸ್ನೇಹಿ ನೀತಿಗೆ ಉದಾಹರಣೆಯಾಗಿದ್ದು ಇಲ್ಲಿ 3 ಸಾವಿರ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಕಳೆದ ಒಂದೆರಡು ವರ್ಷಗಳಲ್ಲಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕ್ರೋನ್ಸ್ ಬಾಟ್ಲಿಂಗ್ ಘಟಕ, ಎಚ್-125 ಮಾದರಿಯ ಹೆಲಿಕಾಪ್ಟರ್ ತಯಾರಿಸುವ ಏರ್ ಬಸ್ ಘಟಕ, ಪೋಲೆಂಡ್ ಮೂಲದ ಟಿಜೆಡ್ಎಂಒ ಉದ್ಯಮ, ಎಮ್ ಝೀರೋ ಕಂಪನಿ ಮುಂತಾದವು ತಮ್ಮ‌ ತಯಾರಿಕಾ ಚಟುವಟಿಕೆ ಆರಂಭಿಸಿವೆ. ಪೊದ್ದಾರ್ ಸಮೂಹದ ಸ್ಥಾವರದಲ್ಲಿ ತಯಾರಿಸುವಂತಹ ಪೈಪ್ ಗಳನ್ನು ಹೊರದೇಶಗಳಿಗೆ ರಫ್ತು ಮಾಡಲಾಗುವುದು. ಇದು ನಮ್ಮ ನೂತನ ಕೈಗಾರಿಕಾ ನೀತಿಗೆ ಪೂರಕವಾಗಿದೆ. ಈ ಘಟಕದಲ್ಲಿ ಕೌಶಲ್ಯ ತರಬೇತಿ ಕೇಂದ್ರವೂ ಇರಲಿದೆ. ಕಂಪನಿಯ ಮಾಲೀಕರು ಭೂಮಿ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳ ಸದಸ್ಯರಿಗೆ ಆದ್ಯತೆಯ ಮೇಲೆ ಉದ್ಯೋಗ ಕೊಡಬೇಕು. ಒಟ್ಟಾರೆಯಾಗಿ ಕನಿಷ್ಠ ಶೇ.60ರಷ್ಟು ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬೇಕು. ಪೊದ್ದಾರ್ ಕಂಪನಿಯು ಪ್ಲಂಬಿಂಗ್ ಮತ್ತಿತರ ಚಟುವಟಿಕೆಗಳಿಗೆ ಬೇಕಾದ ಗುಣಮಟ್ಟದ ಪೈಪುಗಳನ್ನು ತಯಾರಿಸಲಿದೆ. ಪೊದ್ದಾರ್ ಕುಟುಂಬಸ್ಥರು ಆಶೀರ್ವಾದ್ ಪೈಪ್ ಸ್ಥಾಪಕರು ಕೂಡ. ಆಶೀರ್ವಾದ್ ನಿಂದ ಹೊರ ಬಂದಿರುವ ಅವರು 8 ವರ್ಷಗಳ ಬಳಿಕ ತಮ್ಮ ಕುಟುಂಬವಾಗಿರುವ ಪೊದ್ದಾರ್ ಹೆಸರಿನಲ್ಲೇ ಹೊಸ ಬ್ರ್ಯಾಂಡ್ ಆರಂಭಿಸಿರುವುದು ಉತ್ತಮ ಪ್ರಯತ್ನ. ಇಂದಿನ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದೀಪಕ್‌ ಪೊದ್ದಾರ್‌, ಸಿಇಒ ಅವರಾದ ಶ್ರೀ ವರುಣ್‌ ಪೊದ್ದಾರ್‌ ಹಾಗೂ ಅವರ ಪರಿವಾರದ ಸದಸ್ಯರು, ಕೋಲಾರ ಶಾಸಕರಾದ ಶ್ರೀ ಕೊತ್ತನೂರು ಮಂಜುನಾಥ್‌, ಮಾಜಿ ಉಪ ಸಭಾಪತಿಯವರಾದ ಶ್ರೀವಿ.ಆರ್. ಸುದರ್ಶನ್, ಸ್ಥಳೀಯ ಮುಖಂಡರು ಸಂಸ್ಥೆಯ ಉದ್ಯೋಗಿಗಳು ಉಪಸ್ಥಿತರಿದ್ದರು. ಹೂಡಿಕೆ ಒಪ್ಪಂದಗಳು ಕೇವಲ ಕಾಗದಕ್ಕೆ ಸೀಮಿತವಾಗದೆ, ಕಾರ್ಯರೂಪಕ್ಕೆ ಬರುವಂತೆ ಮಾಡುವ ನಮ್ಮ ಬದ್ಧತೆ ಅಚಲ! #PoddarPipes Facebook
10
12
5
86
5,243