ಬೆಂಗಳೂರು ಟೆಕ್ ಸಮಿಟ್ 2026ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಕಂಪನಿಗಳು ಪ್ರದರ್ಶಿಸಿದ ನವೀನ ತಂತ್ರಜ್ಞಾನಗಳು, ಆವಿಷ್ಕಾರಗಳು ಹಾಗೂ ಭವಿಷ್ಯದ ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ಮಳಿಗೆಗಳಿಗೆ ಭೇಟಿ ನೀಡಿ, ಅವುಗಳ ಕಾರ್ಯವೈಖರಿ ಮತ್ತು ವಿಶೇಷತೆಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರಗಳು ಹಾಗೂ ಬೆಳವಣಿಗೆಗಳು ಕರ್ನಾಟಕದ ಭವಿಷ್ಯದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿವೆ.
Participated in the second day of Bengaluru Tech Summit 2026, exploring a diverse range of technological innovations, frontier technologies, and emerging tech solutions showcased by leading companies. Interacted with exhibitors to gain insights into their applications, capabilities, and potential to transform industries.
#BengaluruTechSummit2026 #KarnatakaInnovation #EmergingTechnologies
#FrontierTech
#Bengaluru
1
45
ಬೆಂಗಳೂರು ಟೆಕ್ ಸಮಿಟ್ 2026ರ ಅಂಗವಾಗಿ, ಮಾನ್ಯ ಗೃಹ ಸಚಿವರಾದ ಶ್ರೀ @PriyankKharge ಪ್ರಿಯಾಂಕ್ ಖರ್ಗೆ ಅವರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸಿ, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹಾಗೂ ನಗರಾಭಿವೃದ್ಧಿಯ ಕುರಿತು ಚರ್ಚಿಸಿದೆವು.
ಸುಸ್ಥಿರ, ಸುಗಮ ಮತ್ತು ಅಭಿವೃದ್ಧಿಶೀಲ ಬೆಂಗಳೂರಿನ ನಿರ್ಮಾಣಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಲವರ್ಧನೆ ಅತ್ಯಂತ ಅಗತ್ಯವಾಗಿದೆ.
A metro ride with Hon’ble Home Minister Shri Priyank Kharge during Bengaluru Tech Summit 2026, discussing Bengaluru’s public transport, connectivity and urban development.
Building a better Bengaluru begins with stronger public transport and sustainable urban mobility.
#BengaluruTechSummit2026 #BengaluruMetro #SustainableUrbanDevelopment #PublicTransport #NammaBengaluru
ಬೆಂಗಳೂರು ಟೆಕ್ ಸಮ್ಮಿಟ್ 2026ರ ಅಂಗವಾಗಿ ಆಯೋಜಿಸಲಾಗಿದ್ದ ELСIA ಟ್ರಸ್ಟ್ನ ಮಳಿಗೆಯನ್ನು ಉದ್ಘಾಟಿಸಿ, ಶಿಕ್ಷಣ, ಪೌಷ್ಟಿಕತೆ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಂಸ್ಥೆಯು ಕಳೆದ 23 ವರ್ಷಗಳಿಂದ ಮಾಡುತ್ತಿರುವ ಸೇವಾ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡೆ.
ಸಮಾಜದ ಅಭಿವೃದ್ಧಿ ಮತ್ತು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ELСIA ಟ್ರಸ್ಟ್ ಕೈಗೊಂಡಿರುವ ಕಾರ್ಯಗಳು ಶ್ಲಾಘನೀಯ. ಸಮಾಜಮುಖಿ ಕಾರ್ಯಗಳಿಗೆ ಸದಾ ನಮ್ಮ ಪ್ರೋತ್ಸಾಹ ಮತ್ತು ಸಹಕಾರ ಇರಲಿದೆ.
Investing in children's education and nutrition is an investment in the future of our society. At Bengaluru Tech Summit 2026, I inaugurated the ELCIA Trust stall and appreciated its 23 years of dedicated work towards building stronger communities.
#BengaluruTechSummit2026 #ELCIATrust #EducationForAll #ChildNutrition #CommunityDevelopment
#Bengaluru
ಹೊಸಕೋಟೆ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ 'ಪ್ರಜಾ ಸೇವಾ ಕಾರ್ಯಕ್ರಮ'ವನ್ನು ಉದ್ಘಾಟಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದೆನು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒಟ್ಟು 499 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವೆಲ್ಲವನ್ನೂ ತಕ್ಷಣವೇ ಸಂಬಂಧಪಟ್ಟ ಇಲಾಖೆಗಳ ಪರಿಶೀಲನೆಗೆ ರವಾನಿಸಲಾಗಿದೆ. ನಿಯಮಾನುಸಾರ ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
#PrajaSevaAndolan #PublicGrievanceRedressal #GoodGovernance #Karnataka #Hoskote
42
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ 'ಮಕ್ಕಳ ದಿನಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 'ಪ್ರತಿಭಾ ಪುರಸ್ಕಾರ' ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡಿದವು.
#ChildrensDayCelebration #JawaharlalNehru #YoungAchievers #StudentExcellence #Karnataka #FutureOfIndia #Hoskote
1
31
ಹೊಸಕೋಟೆ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇಂದು ನಡೆದ ಹೋಬಳಿ ಮಟ್ಟದ 'ಪ್ರಜಾ ಸೇವಾ ಕಾರ್ಯಕ್ರಮ'ವನ್ನು ಉದ್ಘಾಟಿಸಿದೆನು.
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 499 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದ್ದು, ಸ್ವೀಕೃತಗೊಂಡ ಎಲ್ಲಾ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳ ಪರಿಶೀಲನೆಗೆ ಕಳುಹಿಸಲಾಗಿದೆ. ನಿಯಮಾನುಸಾರ ಶೀಘ್ರವೇ ಎಲ್ಲರಿಗೂ ನ್ಯಾಯಯುತ ಪರಿಹಾರ ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಅನುರಾಧ ಕೆ.ಎನ್. ಅವರು, ಉಪವಿಭಾಗಾಧಿಕಾರಿ ಶ್ರೀ ಮಂಜುನಾಥ್ ಅವರು, ತಹಶೀಲ್ದಾರ್ ಶ್ರೀಮತಿ ಶೀತಲ್ ಟಿ.ಎಸ್. ಅವರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ರೀ ಮುನಿಯಪ್ಪ ಅವರು, ಡಿವೈಎಸ್ಪಿ ಶ್ರೀ ಮಲ್ಲೇಶ್ ಅವರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಗಣ್ಯರು, ಮುಖಂಡರು ಹಾಗೂ ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.
#PrajasevaAndolan #PublicGrievances #GoodGovernance #Karnataka #Hoskote
2
52
ಕನ್ನಡ ಚಿತ್ರರಂಗದ ಹೊಸ ಮೆರುಗು, “ರಾಮಾಯಣ” ಚಿತ್ರವನ್ನು ಹೊಸಕೋಟೆ ನಗರದ ರಾಘವೇಂದ್ರ ಸರ್ಕಲ್ನಲ್ಲಿರುವ ಶ್ರೀ ರಾಘವೇಂದ್ರ ಚಿತ್ರಮಂದಿರದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವೀಕ್ಷಿಸಿದ ಕ್ಷಣಗಳು.
ಕನ್ನಡದ ಕಲೆಗೆ, ಕನ್ನಡ ಚಿತ್ರರಂಗಕ್ಕೆ ಸದಾ ನಮ್ಮ ಪ್ರೋತ್ಸಾಹ ಮತ್ತು ಬೆಂಬಲ ಇರಲಿ. ಕನ್ನಡ ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೇ ನಮ್ಮ ಆಶಯ. ❤️💛
@TheNameIsYash
#RamayanaPart1 #SandalWoodPride #Yash #Hoskote
1
28
Participated in CREDTECH – Bangalore Edition 2026, engaging in discussions on Bengaluru’s growth as a leading GCC hub, emerging technology opportunities, AI, skill development and employment generation.
The proposed 500 MW data centre park near Hoskote presents a significant opportunity to attract investments, strengthen the local economy and create new opportunities for our youth.
Our vision is to connect local development with global opportunities.
#GCC #AI #DataCenter #SkillDevelopment #Hoskote
60
I strongly condemn the terrorist attack on CRPF personnel in Kulgam district of Jammu and Kashmir.
The attack on our brave security forces, who work tirelessly to safeguard our nation, is deeply disturbing and unacceptable.
I wish a speedy recovery to all the injured jawans. Our nation stands united in respect and solidarity with the brave men and women who dedicate their lives to protecting our country.
Salute to our brave soldiers. Stand united against terrorism.
Jai Hind🇮🇳
#KulgamAttack #StandAgainstTerrorism #SaluteOurBraveForces #JammuAndKashmir #IndianSecurityForces
#JaiHind
1
98
ಹೊಸ ಜವಾಬ್ದಾರಿ, ಹೊಸ ಆಶಯಗಳೊಂದಿಗೆ ಹೊಸಕೋಟೆ ಬಿ.ಎಂ.ಆರ್.ಡಿ.ಎ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಆತ್ಮೀಯರಾದ ಶ್ರೀ ಬಿ.ವಿ. ಬೈರೇಗೌಡ ಅವರಿಗೆ ಹಾಗೂ ನಿರ್ದೇಶಕರಾದ ಶ್ರೀ ಶಿವಕೇಶವರೆಡ್ಡಿ, ಶ್ರೀ ಯರ್ರೇಗೌಡ ಮತ್ತು ಶ್ರೀ ನವಾಜ್ ಅವರಿಗೆ ಗಣ್ಯರು ಹಾಗೂ ಮುಖಂಡರೊಂದಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.
ತಮ್ಮ ಮುಂದಿನ ಕಾರ್ಯಗಳಿಗೆ ಶುಭವಾಗಲಿ. ಸಾರ್ವಜನಿಕ ಸೇವೆ ಮತ್ತು ಕ್ಷೇತ್ರದ ಅಭಿವೃದ್ಧಿಯ ಪಯಣದಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ.
#BMRDA #PublicService #Leadership #Hoskote
62
ನಮ್ಮ ಹೊಸಕೋಟೆಯಲ್ಲಿ ನೂತನ ಸಿವಿಲ್ ನ್ಯಾಯಾಲಯ ಸಂಕೀರ್ಣ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ದಂಡುಪಾಳ್ಯದ ಜಮೀನು ಕಾಯ್ದಿರಿಸಿ ಕಂದಾಯ ಇಲಾಖೆಯಿಂದ ಅಧಿಕೃತ ಆದೇಶ ಹೊರಬಂದಿರುವುದು ಖುಷಿ ತಂದಿದೆ. ಈ ಹಿಂದೆ ನಾನು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದು, ಇಂದು ಈ ಪ್ರಯತ್ನಕ್ಕೆ ಫಲ ಸಿಕ್ಕಿರುವುದು ಸಂತಸದ ವಿಚಾರ.
#JudicialInfrastructure #CivilCourtComplex #Hoskote
2
56
ನಟ-ನಿರ್ದೇಶಕ ಶಂಕರ್ ನಾಗ್ ಅವರ ಜನ್ಮದಿನದಂದು ಅಭಿಮಾನಪೂರ್ವಕ ನಮನಗಳು. ಆಟೋ ರಾಜನಾಗಿ ಬಡವರ ಧ್ವನಿಯಾಗಿ, 'ಮಾಲ್ಗುಡಿ ಡೇಸ್' ಮೂಲಕ ಕನ್ನಡದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ದೂರದೃಷ್ಟಿಯ ಮಹಾನ್ ಚೇತನ. ರಂಗಭೂಮಿ, ಸಿನಿಮಾ ಹಾಗೂ ನಾಡಿನ ಅಭಿವೃದ್ಧಿಯ ಕನಸು ಕಂಡ ಅವರ ಪ್ರತಿಯೊಂದು ಆಲೋಚನೆಯೂ ಇಂದಿಗೂ ಸ್ಪೂರ್ತಿದಾಯಕ.
#ShankarNag #AutoRaja #SandalWoodIcon #Hoskote
ಹೊಸಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಜೊತೆಗೆ ಕೈಗಾರಿಕಾ ಬೆಳವಣಿಗೆಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಸೂಲಿಬೆಲೆ ಹೋಬಳಿಯ ಕಂಬಳೀಪುರದಲ್ಲಿ 120 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಬಡಾವಣೆ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಗೆ ಇಂದು ಭೂಮಿಪೂಜೆ ನೆರವೇರಿಸಲಾಯಿತು.
ಸುಮಾರು ₹36 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಈ ಅಭಿವೃದ್ಧಿ ಕಾಮಗಾರಿಯಡಿ ಡಾಂಬರು ರಸ್ತೆ ನಿರ್ಮಾಣ, ಆರ್.ಸಿ.ಸಿ. ಚರಂಡಿಗಳು, ನೀರು ಸರಬರಾಜು ಪೈಪ್ಲೈನ್, ಮೇಲ್ಮಟ್ಟದ ನೀರಿನ ಸಂಗ್ರಹಣಾ ತೊಟ್ಟಿ, ಸಂಪ್, ಕೊಳವೆಬಾವಿ, ಮಳೆನೀರು ಕೊಯ್ಲು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
ಕೈಗಾರಿಕೆಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದರ ಜೊತೆಗೆ ಹೊಸ ಉದ್ಯೋಗಾವಕಾಶಗಳ ಸೃಷ್ಟಿ, ಸ್ಥಳೀಯ ಯುವಜನತೆಗೆ ಉದ್ಯೋಗ ಮತ್ತು ಕ್ಷೇತ್ರದ ಆರ್ಥಿಕ ಪ್ರಗತಿಗೆ ಈ ಯೋಜನೆ ಮಹತ್ವದ ಕೊಡುಗೆ ನೀಡಲಿದೆ ಎಂಬ ವಿಶ್ವಾಸವಿದೆ. ಕಂಬಳೀಪುರ ಕೈಗಾರಿಕಾ ಪ್ರದೇಶವನ್ನು ಸುಸಜ್ಜಿತ ಕೈಗಾರಿಕಾ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದೆ.
#IndustrialGrowth #InvestmentAndEmployment #EconomicGrowth #Hoskote
1
68
ನಾಡಿನ ಸಮಸ್ತ ಜನತೆಗೆ ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕು ಚೆಲ್ಲುವ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಪರ್ವವು ನಿಮ್ಮ ಮನೆಯಲ್ಲಿ ಸಂತೋಷವನ್ನು, ಮನದಲ್ಲಿ ಹೊಸ ಭರವಸೆಯನ್ನು ಮತ್ತು ಬದುಕಿನಲ್ಲಿ ಸದಾ ಸಕಾರಾತ್ಮಕ ಶಕ್ತಿಯನ್ನು ತುಂಬಲಿ ಎಂದು ಪ್ರಾರ್ಥಿಸುತ್ತೇನೆ.
#Deepavali #FestivalOfLights #LightOverDarkness #TriumphOfGoodOverEvil #HopeAndPositivity #Hoskote
1
65
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಮ್ಮೆಲ್ಲರ ಸಹಕಾರ.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಜಡಿಗೇನಹಳ್ಳಿ ಗ್ರಾಮದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರಿಂದ 111 ಅಹವಾಲುಗಳನ್ನು ಸ್ವೀಕರಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು. ಉಳಿದ ಅಹವಾಲುಗಳನ್ನು ಒಂದು ವಾರದೊಳಗೆ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಜನರ ಬಳಿಗೇ ಆಡಳಿತವನ್ನು ತಲುಪಿಸುವುದು ನಮ್ಮ ಬದ್ಧತೆ.
#PrajasevaAndolana #PublicGrievances #PeopleFirst #Hoskote
1
33
"ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಮ್ಮೆಲ್ಲರ ಸಹಕಾರ"
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಜಡಿಗೇನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ "ಪ್ರಜಾಸೇವಾ ಆಂದೋಲನ ಸಭೆ"ಗೆ ದೀಪ ಬೆಳಗುವ ಮೂಲಕ ಅಧಿಕೃತ ಚಾಲನೆ ನೀಡಿದೆನು.
ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು 111 ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ತಕ್ಷಣದ ಪರಿಹಾರ ಒದಗಿಸಲಾಯಿತು. ಉಳಿದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಮುಂದಿನ ಒಂದು ವಾರದೊಳಗೆ ಸೂಕ್ತ ಪರಿಹಾರ ನೀಡುವ ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆನು.
ಈ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ ಟಿ. ಎಸ್. ಶೀತಲ್ ಅವರು, ಟಿಎಪಿಸಿಎಂಎಸ್ ಅಧ್ಯಕ್ಷರಾದ ಶ್ರೀ ಕೆ. ಎಸ್. ಸುರೇಶ್ ಅವರು ಹಾಗೂ ತಾಲೂಕು ಮತ್ತು ಹೋಬಳಿ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಹಾಗೂ ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.
#PrajasevaAndolan #PublicGrievances #Hoskote
1
33
ಶಿಕ್ಷಣಕ್ಕೆ ಮೂಲಸೌಕರ್ಯ, ಯುವಜನತೆಗೆ ಉಜ್ವಲ ಭವಿಷ್ಯ ಹೊಸಕೋಟೆಗೆ ಇದೇ ನನ್ನ ಸಂಕಲ್ಪ. ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ರೂಪ ನೀಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಡಲಾಗಿದೆ. ಸೂಲಿಬೆಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ಕಟ್ಟಡವನ್ನು ಮರುನಿರ್ಮಿಸಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜೊತೆಗೆ ಬಿ.ಕಾಂ ಪದವಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವಂತೆ 30 ಕಂಪ್ಯೂಟರ್ಗಳನ್ನು ಒದಗಿಸಲಾಗಿದೆ. ಅಲ್ಲದೆ, ಹಾಳಾಗಿದ್ದ ಒಳಾಂಗಣ ಸಭಾಂಗಣವನ್ನೂ ದುರಸ್ತಿಗೊಳಿಸಿ ಸುಸಜ್ಜಿತಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವುದು ಮತ್ತು ಗ್ರಾಮೀಣ ಭಾಗದ ಯುವಜನತೆಗೆ ಗುಣಮಟ್ಟದ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವುದು ನಮ್ಮ ಆದ್ಯತೆ.
#EducationForAll #EmpoweringYouth #FutureReady #TransformingEducation #Hoskote
1
36
ಹೊಸಕೋಟೆಯಿಂದ ಚಿಂತಾಮಣಿವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು.
ಈ ರಸ್ತೆಯನ್ನು ಮೇಲ್ದರ್ಜೆಗೇರಿಸಿ ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದು ಹಾಗೂ ಅಗತ್ಯವಿರುವ ಫ್ಲೈಓವರ್ ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.
ಪ್ರದೇಶದ ಜನರ ಸುಗಮ ಸಂಚಾರ, ಸುರಕ್ಷತೆ ಹಾಗೂ ಭವಿಷ್ಯದ ಸಾರಿಗೆ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಯೋಜಿತ ರೀತಿಯಲ್ಲಿ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
#RoadInfrastructure #InfrastructureDevelopment #RoadSafety #TrafficDecongestion #Hoskote
1
1
31
ಹೊಸಕೋಟೆಯ ನೂತನ ಆಯುಕ್ತರಾದ ಶ್ರೀ ಗಂಗಾಧರ್ ರವರು ಇಂದು ನನ್ನ ಗೃಹಕಚೇರಿಯಲ್ಲಿ ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಹೊಸಕೋಟೆ ಜನಸಾಮಾನ್ಯರ ಹಿತದೃಷ್ಟಿಯಿಂದ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಆಶಯ ವ್ಯಕ್ತಪಡಿಸಲಾಯಿತು.
#PeopleFirst #PublicAdministration
#GoodGovernance #Hoskote
1
27











































