Pinned Tweet
ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಲು ಸಾಲು ದೋಷಗಳು. ಅಭ್ಯರ್ಥಿಗಳು ಕಂಗಾಲು.
ತಪ್ಪು ಹೇಗಾಯಿತು? ಏಕೆ ತಪ್ಪಾಗಿದೆ? ಎಂಬುದಕ್ಕೆ ಕೆಪಿಎಸ್‌ಸಿ ಬಳಿ ಉತ್ತರ ಇಲ್ಲ. #kpscexam #KPSC #Karnataka #KAS
ಮೈಸೂರು ರಸ್ತೆಯ ನೈಸ್ ಜಂಕ್ಷನ್ ಬಳಿ ತುಂತುರು ಮಳೆ🌧🌧 #BengaluruRain
ಟೋಲ್ ಬೂತ್‌ಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ತಪ್ಪಿಸಲು 'ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮತ್ತು ನೆಲಮಂಗಲ- ಬೆಂಗಳೂರು ಹೆದ್ದಾರಿಯಲ್ಲಿ 'ಮಲ್ಟಿ ಲೇನ್ ಫ್ರೀ ಫ್ಲೋ ಟೋಲಿಂಗ್' ವ್ಯವಸ್ಥೆ ಜಾರಿಗೆ ಬರಲಿದೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ರದ್ದಾಗಲಿದೆ. #MLFF #Bengaluru
ಬೇರೆ ದೇಶಗಳಲ್ಲಿ ಅಥವಾ ಬೇರೆ ನಗರಗಳಲ್ಲಿ ಇಂತಹ ಅಂಡರ್‌ಪಾಸ್‌ಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ನಮ್ಮ ಜಿಬಿಎ ಅಧಿಕಾರಿಗಳು ತಿಳಿದುಕೊಂಡು ಅದೇ ಮಾದರಿಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬಹುದಲ್ಲವೇ? @GBA_office @krishnabgowda
ನಗರದಲ್ಲಿ ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚುವುದಿಲ್ಲ. ಹೀಗಾಗಿ, ಬೇಗ ಕಿತ್ತು ಹೋಗುತ್ತವೆ ಎಂಬ ದೂರುಗಳಿಗೆ ಜಿಬಿಎ ಪರಿಹಾರ ಕಂಡು ಹಿಡಿದಿದೆ. Jetpatcher Machine ಬಳಸಿ ವ್ಯವಸ್ಥಿತವಾಗಿ ಗುಂಡಿ ಮುಚ್ಚುವ ಪ್ರಕ್ರಿಯೆಗೆ ಎಂ.ಎಸ್. ಬಿಲ್ಡಿಂಗ್ ಬಳಿ ಚಾಲನೆ ನೀಡಲಾಗಿದೆ. #Bengaluru
ಶೇ.30 ರಷ್ಟು ಸ್ವಚ್ಚತಾ ಸಿಬ್ಬಂದಿ ಕೆಲಸಕ್ಕೆ ಬಂದಿಲ್ಲ. ಎಲ್ಲಾ ಕಡೆ ಕಸ ಬಿದ್ದು ಏರಿಯಾ ಗಬ್ಬೆದ್ದು ನಾರುತ್ತಿದೆ. ಜನರಿಂದ ನಾವು ಬೈಸಿಕೊಳ್ಳುತ್ತಿದ್ದೇವೆ. ಸರಿಯಾಗಿ ಕೆಲಸ ಮಾಡದಿದ್ದರೂ ಪರ್ಮನೆಂಟ್ ಮಾಡಬೇಕೇ? : ದಿಢೀರ್ ಭೇಟಿ ವೇಳೆ ನೌಕರಿ ಪರ್ಮನೆಂಟ್ ಮಾಡಿ ಎಂದ ಸ್ವಚ್ಚತಾ ಕಾರ್ಮಿಕರಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ. #Bengaluru
ತರಾಟೆಗೆ ತೆಗೆದುಕೊಂಡದ್ದನ್ನು ಬರೆದುಕೊಂಡ ಜಿಬಿಎ ಅಧಿಕಾರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತರಾಟೆ😁😯
'ಇಂತಹ ನಾಟಕ ಮಾಡುವುದರಲ್ಲಿ ನಿಸ್ಸೀಮರು ನೀವು' ಎಂದ ಸಚಿವರು.
#Bengaluru
✅ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬಳಿಕ "ಕರಡು ಪಟ್ಟಿ"ಯಲ್ಲಿ ನಗರದ ಮತದಾರರ ಸಂಖ್ಯೆ 1.02 ಕೋಟಿಯಿಂದ 56.99 ಲಕ್ಷಕ್ಕೆ ಇಳಿಕೆ!
✅ 46.88 ಲಕ್ಷ (ಶೇ.45.13) ಮತದಾರರ ಹೆಸರು ಎಎಸ್‌ಡಿಡಿಒ ಪಟ್ಟಿಗೆ ಸೇರ್ಪಡೆ. #Bengaluru #SIR
ಸ್ಟಾರ್ ಹೊಟೇಲ್‌ಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಇಷ್ಟು ಕೆಟ್ಟದಾಗಿ ನಿರ್ವಹಿಸುತ್ತಾರೆ ಎಂಬುದುನ್ನು ಬಹುಶಃ ಯಾರೂ ಊಹಿಸಿರಲಿಲ್ಲ ಎನಿಸುತ್ತದೆ. #Bengaluru
ನಗರದಲ್ಲಿ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ. ತುಂತುರು ಮಳೆ. #BengaluruRain #Monsoon
319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ಕೆಪಿಸಿಎಸ್‌ಸಿಯಿಂದ ಅರ್ಜಿ ಆಹ್ವಾನ.
ನಾಳೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ.
ಗರಿಷ್ಠ ವಯೋಮಿತಿ ಕ್ರಮವಾಗಿ 40, 43 ಹಾಗೂ 45.
ಕೊಚ್ಚಿನ್ ನಗರದ ಮುಖ್ಯರಸ್ತೆ ಸ್ವಚ್ಛ, ಸುಂದರ!
ಕೊಚ್ಚಿನ್‌ನ ಪ್ರಮುಖ ರಸ್ತೆಗಳಲ್ಲಿ
ಎಲ್ಲೆಂದರಲ್ಲೆ ಕಸ ಬಿಸಾಡಿರುವುದು, ಕಟ್ಟಡ ತ್ಯಾಜ್ಯ ಎಸೆದಿರುವುದು ಕಾಣಿಸುವುದಿಲ್ಲ. ಕಂಟೇನರ್ ಟರ್ಮಿನಲ್ ರಸ್ತೆಯಂತು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಜನ & ವಾಹನ ದಟ್ಟಣೆಯ ರಸ್ತೆಯಲ್ಲೂ ತೇಪೆ ಹಾಕಿರುವುದು, ಗುಂಡಿಗಳು, ಕಸ
ಕಾಣಿಸುವುದಿಲ್ಲ!
#KPSC
👉ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಅಂತಿಮ ಆಯ್ಕೆ ಪಟ್ಟಿಯನ್ನು ತಡೆ ಹಿಡಿಯಲಾಗಿದೆ.
👉ಆರೋಪದ ಕುರಿತು ವಿಚಾರಣೆ ನಡೆಸಲು ಕೆಪಿಎಸ್ಸಿಯ ನಾಲ್ವರು ಸದಸ್ಯರ ತಂಡ ರಚಿಸಿ ಕೆಪಿಎಸ್ಸಿ ಕಾರ್ಯದರ್ಶಿ ಆದೇಶ.
ಎಸ್.ಎಂ. ಕೃಷ್ಣ ರಸ್ತೆಯ ವಿದ್ಯುತ್ ದೀಪಗಳು ಬೆಳಗ್ಗೆ 7.50 ಗಂಟೆಯಾದರೂ ಆಫ್ ಮಾಡಿಲ್ಲ. @BDAOfficialGok @Captain_Mani72
ಅನೇಕ ತಿಂಗಳು, ವರ್ಷಗಳಿಂದ ರಸ್ತೆ ಬದಿ, ಫುಟ್‌ಪಾತ್, ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿರುವ ನಿರ್ಲಕ್ಷಿತ ವಾಹನಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ನಗರಾಭಿವೃದ್ಧಿ ಸಚಿವ @krishnabgowda ಚಾಲನೆ ನೀಡಿದ್ದಾರೆ. #Bengaluru #footpath
ಬಹುತೇಕ ಮೂರು ವಾರಗಳ ಬಳಿಕ ಬೆಂಗಳೂರಿಗೆ ಮಳೆ ಬಂತು!
ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ಉತ್ತಮ ಮಳೆಯಾಗುತ್ತಿದೆ. ನಗರದಲ್ಲಿ ಬಹುತೇಕ ಮೋಡ ಮುಸುಕಿದ ವಾತಾವರಣ.
#BengaluruRain
ಆಗಸ್ಟ್ ತಿಂಗಳಲ್ಲಿ “ಕಸಮುಕ್ತ ಬೆಂಗಳೂರು” ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. #Bengaluru #Karnataka
ನಗರದ ಅತ್ಯಂತ ದಟ್ಟಣೆಯ ವ್ಯಾಪಾರ ತಾಣವಾಗಿರುವ ಕೆ.ಆರ್. ಮಾರುಕಟ್ಟೆಯಲ್ಲಿನ ಮಳಿಗೆಗಳ ಬಾಡಿಗೆ ಪರಿಷ್ಕರಣೆಯಾಗಿದೆ.
ಅನೇಕ ವರ್ಷಗಳಿಂದ ಪಾಲಿಕೆಗೆ ಬಾಡಿಗೆಯನ್ನೇ ಕಟ್ಟದ ನೂರಾರು ವ್ಯಾಪಾರಿಗಳು!
#KRMarket #Bengaluru
ರಸ್ತೆ ಬದಿ, ಸಾರ್ವಜನಿಕ ಸ್ಥಳಗಳು, ಪಾದಚಾರಿ ಮಾರ್ಗದ ಮೇಲೆ ಅನೇಕ ವರ್ಷಗಳಿಂದ ನಿಲ್ಲಿಸಿರುವ ಅನಾಥ ವಾಹನಗಳನ್ನು ತೆರವುಗೊಳಿಸಬೇಕು ಎನ್ನುವ ನಗರದ ಜನರ ಅನೇಕ ವರ್ಷಗಳ ಬೇಡಿಕೆ ಈಡೇರುತ್ತಿದೆ!
ಅನಾಥ ವಾಹನ ತೆರವು ಮಾಡುವ ಕಾರ್ಯಾಚರಣೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಇಂದು ಚಾಲನೆ ನೀಡಿದರು. #Bengaluru #Footpath
ನಗರದಲ್ಲಿ ಪುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಮುಂದುವರೆದ ಭಾಗವಾಗಿ ಅನಾಥ ವಾಹನಗಳ ತೆರವು ಮತ್ತು ಹರಾಜು ಪ್ರಕ್ರಿಯೆಯನ್ನು ನಾಳೆಯಿಂದ ಆರಂಭಿಸಲಾಗುತ್ತಿದೆ. #Bengaluru #Footpath









