ವ್ಯತ್ಯಾಸ ಇಷ್ಟೇ..! ಜನಪರ ಆಡಳಿತಕ್ಕೂ, ಜನವಿರೋಧಿ ಆಡಳಿತಕ್ಕೂ ಇರುವ ಅಂತರ ಇದೇ!
ಜಾಗತಿಕವಾಗಿ ತೈಲ ಬೆಲೆ ಏರಿಕೆಯಾದರೂ ದೇಶದ ಜನಸಾಮಾನ್ಯರ ಹಿತದೃಷ್ಟಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿ, ಪ್ರತಿ ಲೀಟರ್ಗೆ ₹10ರಷ್ಟು ಪರಿಹಾರ ಒದಗಿಸಿದ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ. ಅದೇ ರೀತಿ, ಹಿಂಗಾರು ಹಂಗಾಮಿನ ರಸಗೊಬ್ಬರ ಸಬ್ಸಿಡಿಗಾಗಿ ₹62 ಸಾವಿರ ಕೋಟಿಗೂ ಅಧಿಕ ಮೊತ್ತ ಮೀಸಲಿಟ್ಟು ಅನ್ನದಾತರ ಬೆನ್ನಿಗೆ ನಿಂತಿದೆ.
ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತರ ಸಮಸ್ಯೆಗಳು ಹಾಗೂ ಜನಸಾಮಾನ್ಯರ ಸಂಕಷ್ಟಗಳು ನಿರಂತರ ಚರ್ಚೆಯ ವಿಷಯವಾಗಿವೆ. ಕೃಷಿ ಸಮ್ಮಾನ್ ಯೋಜನೆಯ ರಾಜ್ಯದ ಪಾಲು, ಬರ ಪರಿಹಾರ ಮತ್ತು ರೈತರ ನೆರವಿನ ವಿಚಾರದಲ್ಲಿ ಸರ್ಕಾರದ ಜವಾಬ್ದಾರಿಯ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.
ಒಂದೆಡೆ ಜನರ ಹಿತಕ್ಕಾಗಿ ಆರ್ಥಿಕ ಹೊರೆ ಹೊರುವ ಕೇಂದ್ರ ಸರ್ಕಾರ; ಮತ್ತೊಂದೆಡೆ ಜನರ ನಿರೀಕ್ಷೆಗಳಿಗೆ ಉತ್ತರಿಸಬೇಕಾದ ರಾಜ್ಯ ಸರ್ಕಾರ!
ಕನ್ನಡಿಗರಿಗೆ ಬೇಕಿರುವುದು ಕೇವಲ ಭರವಸೆಗಳಲ್ಲ, ಪರಿಣಾಮಕಾರಿ ಆಡಳಿತ ಮತ್ತು ಜನಪರ ಕಾರ್ಯಗಳು.
#CongressFailsKarnataka
3
ಬುಡಕಟ್ಟು ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರಧಾನಿ ಶ್ರೀ @narendramodi ಜಿ ಅವರ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದೆ. ಪಕ್ಕಾ ಮನೆಗಳು, ವಿದ್ಯುತ್, ಶುದ್ಧ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸಲಾಗುತ್ತಿದೆ.
ಪಿಎಂ-ಜನ್ಮನ್ ಯೋಜನೆಯಡಿ 75 ದುರ್ಬಲ ಬುಡಕಟ್ಟು ಗುಂಪುಗಳ ಅಭಿವೃದ್ಧಿಗಾಗಿ ₹24,104 ಕೋಟಿ ಬಜೆಟ್ ಅನುಮೋದಿಸಲಾಗಿದೆ. ಅಭಿವೃದ್ಧಿಯ ಈ ವೇಗವು ಸಮೃದ್ಧ ಹಾಗೂ ಸಶಕ್ತ ನವ ಭಾರತದ ನಿರ್ಮಾಣಕ್ಕೆ ಹೊಸ ದಿಕ್ಕು ನೀಡುತ್ತಿದೆ.
#JanjatiyaGauravDiwas
17
ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಶ್ರೀ ಕಲ್ಮಠದ ಆವರಣದಲ್ಲಿ ನಿರ್ಮಿಸಿರುವ 21 ಅಡಿ ಎತ್ತರದ ಏಕಶಿಲಾ ಮೂರ್ತಿ ಹಾಗೂ ಉದ್ಯಾನವನ ಕಾರಂಜಿಯ ಲೋಕಾರ್ಪಣೆ ಸಮಾರಂಭದಲ್ಲಿ ಇಂದು ಭಾಗವಹಿಸಿ, ಮಾತನಾಡಿದೆನು.
ಗುತ್ತಲದ ಶ್ರೀ ಕಲ್ಮಠ ಹಾಗೂ ಅಗಡಿಯ ಶ್ರೀ ಪ್ರಭುಸ್ವಾಮಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿಯವರು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಅನೇಕ ಬಗೆಯ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿರುವುದಕ್ಕೆ ಅಭಿನಂದನೆ ಸಲ್ಲಿಸಿದೆನು.
ಸಮಾರಂಭದಲ್ಲಿ ಮುಂಡರಗಿ ಸಂಸ್ಥಾನ ಮಠದ ಶ್ರೀ ಅನ್ಮದಾನೀಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಅಂಬಿಗರ ಚೌಡಯ್ಯನವರ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರುದ್ರಪ್ಪ ಲಮಾಣಿ, ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಬಂಗಾರು ಹನುಮಂತು, ಮಾಜಿ ಶಾಸಕರಾದ ಶ್ರೀ ಶಿವರಾಜ ಸಜ್ಜನರ, ಜಿಪಂ ಮಾಜಿ ಸದಸ್ಯರಾದ ಶ್ರೀ ಸಿದ್ದರಾಜ ಕಲಕೋಟಿ, ಸ್ಥಳೀಯ ಮುಖಂಡರಾದ ಶ್ರೀ ಗವಿಸಿದ್ದಪ್ಪ ದ್ಯಾಮಣ್ಣನವರ, ಶ್ರೀ ಮಾರುತಿ ಗೊರವರ, ನೀಲಪ್ಪ ಚಾವಡಿ, ಸೇರಿದಂತೆ ವಿವಿಧ ಮಠಾದೀಶರು, ಗಣ್ಯರು, ಸಾವಿರಾರು ಭಕ್ತರು ಉಪಸ್ಥಿತರಿದ್ದರು.
2
119
Warm birthday wishes to Shri @Tejasvi_Surya Hon’ble Member of Parliament from Bengaluru South.
May you be blessed with good health, happiness and continued success. Wishing you many more years of dedicated service to the nation and meaningful contributions towards Bharat’s growth and development. Have a wonderful year ahead!
ಸಮಸ್ತ ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನದ ಹಾರ್ದಿಕ ಶುಭಾಶಯಗಳು.
ಸಮಾಜದ ಏಳಿಗೆ, ಪ್ರಜಾಪ್ರಭುತ್ವದ ಬಲವರ್ಧನೆ ಹಾಗೂ ಜನಸಾಮಾನ್ಯರ ಹಕ್ಕುಗಳ ರಕ್ಷಣೆಯಲ್ಲಿ ಪತ್ರಿಕಾರಂಗದ ಕೊಡುಗೆ ಅನನ್ಯವಾದುದು. ಸತ್ಯದ ಅನಾವರಣ, ನಿರ್ಭೀತ ವರದಿಗಾರಿಕೆ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೂಲಕ ಸಮಾಜಕ್ಕೆ ಸರಿಯಾದ ದಿಕ್ಕು ತೋರಿಸುತ್ತಿರುವ ಮಾಧ್ಯಮ ಮಿತ್ರರ ಸೇವೆ ಶ್ಲಾಘನೀಯ.
#NationalPressDay
2
92
ಇಂದು ಹಾವೇರಿ ತಾಲೂಕಿನ ಗುತ್ತಲದ ಶ್ರೀ ಕಲ್ಮಠದಲ್ಲಿ ನಡೆಯುವ "ಸಮಾಜ ಸುಧಾರಕ 12 ನೇ ಶತಮಾನದ ವಚನ ಕ್ರಾಂತಿಯ ಹರಿಕಾರ, ಕಾಯಕವೇ ಕೈಲಾಸ ಎಂಬ ನಾಣ್ಣುಡಿಯನ್ನು ಜಗತ್ತಿಗೆ ಸಾರಿದ ಜಗಜ್ಯೋತಿ ಬಸವಣ್ಣನವರ 21 ಅಡಿ ಎತ್ತರದ ಏಕಶಿಲಾ ಮೂರ್ತಿ ಉದ್ಯಾನವನ ವರ್ಣರಂಜಿತ ಕಾರಂಜಿಯ ಲೋಕಾರ್ಪಣೆ ಕಾರ್ಯಕ್ರಮ" ದಲ್ಲಿ ಭಾಗವಹಿಸಿವೆನು.
#ಹಾವೇರಿ
62
ಇಂದು ಹುಬ್ಬಳ್ಳಿಗೆ ಆಗಮಿಸಿದ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿಗಳಾದ ಶ್ರೀ ಹರೀಶ್ ದ್ವಿವೇದಿ ಅವರನ್ನು ಹುಬ್ಬಳ್ಳಿಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಆತ್ಮೀಯವಾಗಿ ಸ್ವಾಗತಿಸಿದೆನು.
ಧಾರವಾಡ ವಿಭಾಗದ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸಿ, ಸಂಘಟನೆಯ ಬಲವರ್ದನೆ ನಿಟ್ಟಿನಲ್ಲಿ ಕೆಲ ಸಲಹೆ, ಸೂಚನೆಗಳನ್ನು ನೀಡಿದೆನು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮಾಜಿ ಸಚಿವರಾದ ಶ್ರೀ ಮುರಗೇಶ ನಿರಾಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ರಾಜೀವ, ಭೋಜರಾಜ ಕರೂದಿ, ಹುಬ್ಬಳ್ಳಿ- ಧಾರವಾಡ, ಧಾರವಾಡ ಗ್ರಾಮೀಣ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಹಿರಿಯ ನಾಯಕರು, ಪ್ರಮುಖರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
#BJPHubballiDhrwad
#HarishDwivedi @HarishD_BJP @BJP4Karnataka @BJP4India @NitinNabin
3
143
ಬುಡಕಟ್ಟು ಸಮುದಾಯಗಳ ಇತಿಹಾಸಕ್ಕೆ ಗೌರವ, ಅವರ ಪರಂಪರೆಗೆ ರಾಷ್ಟ್ರೀಯ ಮನ್ನಣೆ ಹಾಗೂ ಭವಿಷ್ಯಕ್ಕೆ ಅಭಿವೃದ್ಧಿಯ ಅವಕಾಶಗಳು.
ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರವು ಜನಜಾತೀಯ ಗೌರವ ದಿವಸ್, ಪಿಎಂ-ಜನ್ಮನ್ ಮತ್ತು ಬುಡಕಟ್ಟು ಕಲ್ಯಾಣ ಯೋಜನೆಗಳ ಮೂಲಕ ಸಮುದಾಯಗಳ ಸಬಲೀಕರಣಕ್ಕೆ ಶ್ರಮಿಸುತ್ತಿದೆ.
ಪರಂಪರೆಯ ಹೆಮ್ಮೆ, ಸಬಲೀಕರಣದ ಹೆಜ್ಜೆ... ವಿಕಸಿತ ಭಾರತದ ಸಂಕಲ್ಪ.
#JanjatiyaGauravDiwas
40
ವಿಶ್ವ ಮಧುಮೇಹ ದಿನ.
ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಮಧುಮೇಹವನ್ನು ನಿಯಂತ್ರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಆರೋಗ್ಯಕರ ಆಹಾರ, ದೈಹಿಕ ವ್ಯಾಯಾಮ ಮತ್ತು ಜಾಗೃತಿಯೇ ಮಧುಮೇಹ ಮುಕ್ತ ಆರೋಗ್ಯವಂತ ಸಮಾಜದತ್ತ ನಮ್ಮ ಹೆಜ್ಜೆಯಾಗಲಿ.
ಆರೋಗ್ಯವೇ ನಿಜವಾದ ಸಂಪತ್ತು.
38
ಇಂದು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 67ರ ಚೋಳಿನವರ ಓಣಿಯ ಶ್ರೀ ಬನಶಂಕರಿ ದೇವಸ್ಥಾನದ ಸಮೀಪ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಸ್ವಚ್ಛ ಸಂಡೆ’ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದೆನು.
ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಪ್ರತಿಯೊಬ್ಬರ ಜೀವನದ ಭಾಗವಾಗಬೇಕು. ಸ್ವಚ್ಛ ಪರಿಸರ ನಿರ್ಮಾಣದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ.
ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಹುಬ್ಬಳ್ಳಿ-ಧಾರವಾಡ ನಿರ್ಮಾಣದ ಸಂಕಲ್ಪದೊಂದಿಗೆ ನಿರಂತರವಾಗಿ ಶ್ರಮಿಸುತ್ತಿರುವ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸ್ವಯಂಸೇವಕರ ಕಾರ್ಯ ಶ್ಲಾಘನೀಯ.
ಬನ್ನಿ, ಸ್ವಚ್ಛತೆಯನ್ನು ನಮ್ಮೆಲ್ಲರ ಜವಾಬ್ದಾರಿಯನ್ನಾಗಿ ಮಾಡೋಣ.
ಸ್ವಚ್ಛ ನಗರ, ಸುಂದರ ನಗರ, ಆರೋಗ್ಯಕರ ನಗರ!
@narendramodi @BJP4Karnataka
46
ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ಆದಿವಾಸಿ ಸಮುದಾಯಗಳ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಧೀಮಂತ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಶತಶತ ನಮನಗಳು.
ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡಿ, ಜಲ, ಜಂಗಲ್ ಮತ್ತು ಜಮೀನುಗಳ ರಕ್ಷಣೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿದ ಅವರ ಧೈರ್ಯ, ತ್ಯಾಗ ಮತ್ತು ಹೋರಾಟದ ಬದುಕು ಇಂದಿಗೂ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ.
ಅವರ ಆದರ್ಶಗಳು, ದೇಶಪ್ರೇಮ ಮತ್ತು ಸಮಾಜದ ಏಳಿಗೆಗಾಗಿ ಸಲ್ಲಿಸಿದ ಅಮೂಲ್ಯ ಕೊಡುಗೆ ಸದಾ ಸ್ಮರಣೀಯ.
ಎಲ್ಲರಿಗೂ ಜನಜಾತೀಯ ಗೌರವ ದಿವಸದ ಹಾರ್ದಿಕ ಶುಭಾಶಯಗಳು.
#BirsaMunda
50
ಕೆಎಲ್ ಇ ಸಂಸ್ಥೆಯ ಹುಬ್ಬಳ್ಳಿಯ ಬಿ.ವಿ.ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜ್ ನ ಸಿವಿಲ್ ವಿಭಾಗದ ಪ್ರಾಧ್ಯಾಪಕರು ಹಾಗೂ ನನ್ನ ವಿದ್ಯಾರ್ಥಿ ಮಿತ್ರರೂ ಆದ ಪ್ರೊ.ಎಂ.ಆರ್.ಪಾಟೀಲ ಅವರು ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ನೂತನ ಗೃಹಪ್ರವೇಶ ಹಾಗೂ ಗುರುವಂದನೆ ಸಮಾರಂಭದಲ್ಲಿ ಭಾಗವಹಿಸಿ, ಎಂ.ಆರ್.ಪಾಟೀಲ, ಪ್ರೊ.ಲಲಿತಾ ಪಾಟೀಲ ದಂಪತಿಯನ್ನು ಸನ್ಮಾನಿಸಿ, ಶುಭ ಹಾರೈಸಿದೆನು.
ಈ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮೀಜಿಯವರಿಂದ ಆಶೀರ್ವಾದ ಪಡೆದುಕೊಂಡೆನು.
ಸಮಾರಂಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮಾಜಿ ಸಚಿವರಾದ ಶ್ರೀ ಮುರುಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ವಿ.ಸಂಕನೂರ, ಶ್ರೀ ಲಿಂಗರಾಜ ಪಾಟೀಲ, ಸೇವಾ ಭಾರತಿ ಕಾರ್ಯದರ್ಶಿಗಳಾದ ಶ್ರೀ ರಘು ಅಕಮಂಚಿ, ಮಾಜಿ ಮೇಯರ್ ಶ್ರೀಮತಿ ಜ್ಯೋತಿ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.
60
ಇಂದು ಧಾರವಾಡದ ಸತ್ತೂರು ಬಳಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT)ಯ ಕ್ಯಾಂಪಸ್ಗೆ ಸೌಹಾರ್ದಯುತವಾಗಿ ಭೇಟಿ ನೀಡಿ, ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಸ್. ಆರ್. ಮಹದೇವ ಪ್ರಸನ್ನ ಹಾಗೂ ಬೋಧಕ ಮತ್ತು ತಂತ್ರಜ್ಞರ ತಂಡದೊಂದಿಗೆ ಫಲಪ್ರದ ಚರ್ಚೆ ನಡೆಸಿದೆನು.
ಈ ಸಂದರ್ಭದಲ್ಲಿ IIIT ಧಾರವಾಡದ ತಂತ್ರಜ್ಞರ ತಂಡ ಅಭಿವೃದ್ಧಿಪಡಿಸಿರುವ ‘ಭಾಷಿಣಿ’ (BHASHINI) ಆ್ಯಪ್ ಕುರಿತು ಸವಿಸ್ತಾರವಾದ ಮಾಹಿತಿ ಪಡೆದುಕೊಂಡೆನು.
ಆಂಗ್ಲ ಭಾಷೆ ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ನಡುವಿನ ಧ್ವನಿ ಮತ್ತು ಭಾಷಾ ಅನುವಾದಕ್ಕೆ ನೆರವಾಗುವ ಈ ತಂತ್ರಜ್ಞಾನವು ಭಾಷಾ ಅಡೆತಡೆಗಳನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ವಿಶೇಷವಾಗಿ ಮಲಯಾಳಂ ಭಾಷೆಯಿಂದ ಕನ್ನಡ ಸೇರಿದಂತೆ ಇತರ ಭಾರತೀಯ ಭಾಷೆಗಳಿಗೆ ಭಾಷಾಂತರ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಕುರಿತು ತಂಡದವರು ವಿವರಿಸಿದರು.
ಈ ಮಹತ್ವದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ IIIT ಧಾರವಾಡದ ನಿರ್ದೇಶಕರು, ಬೋಧಕ ವರ್ಗ ಹಾಗೂ ತಂತ್ರಜ್ಞರ ತಂಡದ ಕಾರ್ಯವನ್ನು ಶ್ಲಾಘಿಸಿ, ಅಭಿನಂದಿಸಿದೆನು.
ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಜೀ ಅವರ ದೂರದೃಷ್ಟಿಯ ನಾಯಕತ್ವ ಹಾಗೂ ಡಿಜಿಟಲ್ ಸಬಲೀಕರಣದ ಸಂಕಲ್ಪದಿಂದ ಪ್ರೇರಣೆ ಪಡೆದು, ಇಂತಹ ನವೀನ ತಂತ್ರಜ್ಞಾನಗಳು ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಮತ್ತಷ್ಟು ಬಲ ತುಂಬಲಿವೆ. ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ ತಂತ್ರಜ್ಞಾನವನ್ನು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಇವು ಮಹತ್ವದ ಕೊಡುಗೆ ನೀಡಲಿವೆ.
ಉತ್ತರ ಕರ್ನಾಟಕದ ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ IIIT ಧಾರವಾಡವು ಮಹತ್ವದ ಕೇಂದ್ರವಾಗಿ ಬೆಳೆಯುವ ಅಪಾರ ಸಾಮರ್ಥ್ಯ ಹೊಂದಿದೆ. ಸಂಸ್ಥೆಯ ಮತ್ತಷ್ಟು ಅಭಿವೃದ್ಧಿಗೆ ಹಾಗೂ ನಮ್ಮ ಯುವಜನತೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಅಗತ್ಯ ಸಹಕಾರ ಮತ್ತು ಪ್ರಯತ್ನಗಳನ್ನು ಮುಂದುವರಿಸುವ ಆಶಯ ಹೊಂದಿದ್ದೇನೆ.
ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಕೆ. ಟಿ. ದೀಪಕ್ ಹಾಗೂ ಇತರರು ಉಪಸ್ಥಿತರಿದ್ದರು.
Visited the Indian Institute of Information Technology (IIIT), Dharwad, at Sattur today and had a cordial interaction with Prof. S. R. Mahadeva Prasanna, Director of IIIT Dharwad, and the faculty and technical team.
During the visit, I was briefed on ‘BHASHINI’, an innovative language translation application developed by the IIIT Dharwad team. The technology enables voice and language translation across English and various Indian languages.
The team explained in detail how BHASHINI facilitates translation from Malayalam to Kannada and several other Indian languages, helping bridge language barriers and making communication more accessible.
I appreciated and congratulated the Director, faculty and technical team for their commendable efforts in developing this technology.
Inspired by the visionary leadership of Hon’ble Prime Minister Shri Narendra Modi Ji and his vision of a digitally empowered India, such innovations play an important role in promoting technology, linguistic inclusion and digital accessibility.
IIIT Dharwad has immense potential to emerge as a leading centre of technological excellence in North Karnataka. I look forward to continued engagement and constructive efforts towards strengthening the institution and creating greater opportunities for our youth.
Also present were Dr. K. T. Deepak, Assistant Professor, and other faculty members.
#IIITDharwad #BHASHINI #DigitalIndia #ModiJi #Technology #Dharwad
1
76
ಕ್ಷಯರೋಗದ ವಿರುದ್ಧ ನಿರಂತರ ಸಮರ, ಟಿಬಿ ಮುಕ್ತ ಭಾರತದತ್ತ ದೃಢ ಹೆಜ್ಜೆ! 🏥
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನಪರ ಆಡಳಿತ ಮತ್ತು ಬದ್ಧತೆಯ ಫಲವಾಗಿ ಕ್ಷಯರೋಗದ ವಿರುದ್ಧದ ಹೋರಾಟ ಇಂದು ರಾಷ್ಟ್ರವ್ಯಾಪಿ ಜನಾಂದೋಲನವಾಗಿ ಬೆಳೆದಿದೆ.
ತೀವ್ರ ತಪಾಸಣಾ ಅಭಿಯಾನದ ಮೂಲಕ ಕೋಟ್ಯಂತರ ಜನರನ್ನು ಪರೀಕ್ಷಿಸಿ, ಆಧುನಿಕ ತಂತ್ರಜ್ಞಾನದ ನೆರವಿನಿಂದ ರೋಗಿಗಳನ್ನು ಗುರುತಿಸಲಾಗುತ್ತಿದೆ. ಸಕಾಲಿಕ ರೋಗ ಪತ್ತೆ, ಸೂಕ್ತ ಚಿಕಿತ್ಸೆ ಮತ್ತು ಜನಸಹಭಾಗಿತ್ವಕ್ಕೆ ಆದ್ಯತೆ ನೀಡುವ ಮೂಲಕ ಆರೋಗ್ಯವಂತ ಭಾರತದ ನಿರ್ಮಾಣಕ್ಕೆ ಹೊಸ ವೇಗ ನೀಡಲಾಗುತ್ತಿದೆ.
@narendramodi
#TBMuktBharat
ನಾಡಿನ ಸಮಸ್ತ ಮುದ್ದು ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಹಾಗೂ ಪ್ರೀತಿಪೂರ್ವಕ ಶುಭಾಶಯಗಳು.
ಮಕ್ಕಳ ಮುಗ್ಧ ನಗು, ಸುಂದರ ಕನಸುಗಳು ಮತ್ತು ಅಪಾರ ಪ್ರತಿಭೆಯೇ ನಮ್ಮ ದೇಶದ ಭವಿಷ್ಯದ ಆಶಾಕಿರಣಗಳು. ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ, ಸಮಾನ ಅವಕಾಶ ಹಾಗೂ ಸುರಕ್ಷಿತ ವಾತಾವರಣ ದೊರೆಯಲಿ. ಅವರ ಕನಸುಗಳು ನನಸಾಗಿ, ಸಾಧನೆಯ ಹಾದಿಯಲ್ಲಿ ಮುನ್ನಡೆಯಲಿ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸೋಣ.
3
84
A MASSIVE SHOW OF SUPPORT IN KOTTAYAM, KERALAM!
It was inspiring to witness the overwhelming public participation in the ‘Loktantra Bachao, Bheedtantra Hatao’ Democratic Protection Padayatra at Kottayam, Keralam.
Thousands of enthusiastic @BJP4Keralam Karyakartas and common people from different districts came together in a powerful display of solidarity, raising their voices against political anarchy, corruption, double standards and the injustice surrounding the SIR issue.
The massive participation reflects the people's faith in the leadership of Hon'ble Prime Minister Shri Narendra Modi Ji and their commitment to protecting democracy.
The people's voice is rising. The spirit of democracy is unstoppable!
#SaveDemocracyRemoveAnarchy #LoktantraBachao #BheedtantraHatao #Keralam #BJP #NarendraModi @blsanthosh
🚆 Indian Railways: Connecting Aspirations, Transforming India! 🇮🇳
India's railway network is witnessing a remarkable transformation under the vision of Prime Minister Shri @narendramodi Ji.
From modernised railway stations and improved passenger amenities to an expanding network of Vande Bharat services, Indian Railways is redefining the passenger experience.
The new Vande Bharat connection between Karnataka and Goa is another significant step towards strengthening connectivity across the coastal region.
A modern railway network, a connected nation and a stronger India!
#PMModiInBengaluru #ViksitBharat #IndianRailways #VandeBharat
1
56
ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ ಯುವಜನತೆಗೆ ಯೋಗದ ಮಾರ್ಗ ತೋರಿಸಿದರು.
ಅವರ ಪ್ರೇರಣೆಯಿಂದ ಹುಟ್ಟಿದ ಪ್ರಶಾಂತಿ ಕುಟೀರಂ ಮತ್ತು ಎಸ್-ವ್ಯಾಸ ಸಂಸ್ಥೆಗಳು ಯೋಗ, ಆಯುರ್ವೇದ ಹಾಗೂ ಆಧುನಿಕ ವಿಜ್ಞಾನದ ಸಂಶೋಧನೆಯ ಮೂಲಕ ವಿಶ್ವಕ್ಕೆ ಮಾದರಿಯಾಗಿವೆ.
- ಪ್ರಧಾನಿ ಶ್ರೀ @narendramodi Ji.
#KarnatakaWelcomesPMModi
1
63








































