ಸಿರುಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಬಗ್ಗೂರು ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಂಡು, ವಿವಿಧ ಕಾನೂನುಗಳ ಕುರಿತು ಜಾಗೃತಿ ಮೂಡಿಸಲಾಯಿತು. ಎಎಸ್‌ಐ ವೀರೇಶ್ ಸೇರಿದಂತೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
124
ಬಳ್ಳಾರಿ ಫೈರಿಂಗ್ ರೇಂಜ್‌ನಲ್ಲಿ ಇಂದು ವಾರ್ಷಿಕ ಗುಂಡು ಹಾರಿಸುವ ಅಭ್ಯಾಸವನ್ನು ನಡೆಸಲಾಯಿತು. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಭಾಗವಹಿಸಿ ಶಸ್ತ್ರಾಸ್ತ್ರ ಬಳಕೆಯ ಕೌಶಲ್ಯ ಮತ್ತು ನಿಖರತೆಯನ್ನು ಅಭ್ಯಾಸದ ಮೂಲಕ ಮತ್ತಷ್ಟು ವೃದ್ಧಿಸಿಕೊಂಡರು.
240
🚫 ರಾಂಗ್ ಸೈಡ್ ಚಾಲನೆ – ಜೀವಕ್ಕೆ ಅಪಾಯ, ಕುಟುಂಬಕ್ಕೆ ಆಘಾತ! 🛑
ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಕೇವಲ ಸಂಚಾರ ನಿಯಮದ ಉಲ್ಲಂಘನೆಯಲ್ಲ, ಅದು ನಿಮ್ಮ ಹಾಗೂ ಇತರರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ.
🚦 ಸರಿಯಾದ ದಿಕ್ಕಿನಲ್ಲಿ ಚಲಿಸಿ – ಸಂಚಾರ ನಿಯಮ ಪಾಲಿಸಿ – ಸುರಕ್ಷಿತವಾಗಿ ಗಮ್ಯ ತಲುಪಿ!
1
280
📱 ನಿಮ್ಮ ಹೆಸರಿನ ಸಿಮ್ ಕಾರ್ಡ್ – ನಿಮ್ಮ ಜವಾಬ್ದಾರಿ!
ನಿಮ್ಮ ಹೆಸರಿನಲ್ಲಿ ಪಡೆದಿರುವ ಸಿಮ್ ಕಾರ್ಡ್‌ಗಳನ್ನು ನೀವೇ ಬಳಸಿ. ಬೇರೆಯವರಿಗೆ ನೀಡಬೇಡಿ. ನಿಮ್ಮ ಸಿಮ್ ಕಾರ್ಡ್ ದುರ್ಬಳಕೆಯಾಗಿ ಸೈಬರ್ ವಂಚನೆಗೆ ಬಳಕೆಯಾದರೆ ನೀವು ಕಾನೂನು ಸಂಕಷ್ಟಕ್ಕೆ ಸಿಲುಕಬಹುದು.
⚠️ ಸಿಮ್ ಕಾರ್ಡ್ ಸುರಕ್ಷಿತವಾಗಿರಲಿ, ಸೈಬರ್ ಅಪರಾಧಗಳಿಂದ ದೂರವಿರಿ!
178
🚦 ನಿಮ್ಮ ಆತುರಕ್ಕಿಂತ ನಿಮ್ಮ ಜೀವ ಅಮೂಲ್ಯ!
ಕೆಂಪು ದೀಪದಲ್ಲಿ ನಿಲ್ಲುವುದು ಕೇವಲ ನಿಯಮವಲ್ಲ, ಅದು ನಿಮ್ಮ ಮತ್ತು ಇತರರ ಜೀವದ ಸುರಕ್ಷತೆಗಾಗಿ ಅಗತ್ಯವಾದ ಜವಾಬ್ದಾರಿ.
ನಿಯಮ ಪಾಲಿಸಿ – ಸುರಕ್ಷಿತವಾಗಿರಿ.
238
ಬಳ್ಳಾರಿ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (DAR) ಉಪ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ವಾರದ ಕವಾಯತು ನಡೆಸಿ ಗೌರವ ವಂದನೆ ಸ್ವೀಕರಿಸಲಾಯಿತು. ಬಳಿಕ ಅಧಿಕಾರಿ ಹಾಗೂ ಸಿಬ್ಬಂದಿಯವರ ಕುಂದುಕೊರತೆಗಳನ್ನು ಆಲಿಸಿ, ಕರ್ತವ್ಯವನ್ನು ಶಿಸ್ತು, ಬದ್ಧತೆ ಹಾಗೂ ಜವಾಬ್ದಾರಿಯಿಂದ ನಿರ್ವಹಿಸುವಂತೆ ಸೂಚಿಸಲಾಯಿತು.
ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮೋತಿ ಸರ್ಕಲ್‌ನಲ್ಲಿ ದೊರೆತ ಮೊಬೈಲ್ ಹಾಗೂ ಹಣವಿದ್ದ ಬ್ಯಾಗ್ ಅನ್ನು ವಾರಸುದಾರರಿಗೆ ಸುರಕ್ಷಿತವಾಗಿ ಹಿಂದಿರುಗಿಸಿದ ಪೊಲೀಸರ ಕಾರ್ಯ ಶ್ಲಾಘನೀಯ. “ಪಿಐ ಮಹಾಂತೇಶ್.ಟಿ”ಹಾಗೂ ತಂಡಕ್ಕೆ ಅಭಿನಂದನೆಗಳು.
🚔 ಬಾಕಿ ಇರುವ ಸಂಚಾರ ಇ-ಚಲನ್ ಪ್ರಕರಣಗಳಿಗೆ ಸುವರ್ಣಾವಕಾಶ!
ಕರ್ನಾಟಕ ಸರ್ಕಾರದ ವಿಶೇಷ ಅಭಿಯಾನದಡಿ ಬಾಕಿ ಇರುವ ಸಂಚಾರ ಇ-ಚಲನ್ ದಂಡದ ಮೊತ್ತದಲ್ಲಿ 50% ರಿಯಾಯಿತಿ ಪಡೆಯಿರಿ.
📅 ನವೆಂಬರ್ 21 ರಿಂದ ಡಿಸೆಂಬರ್ 11, 2026 ರವರೆಗೆ ಮಾತ್ರ.
🌐 ಆನ್‌ಲೈನ್ ಮೂಲಕ ಅಥವಾ ಕೆಳಗಿನ ಕ್ಯೂಆರ್ ಕೋಡ್ ಬಳಸಿ ನಿಮ್ಮ ಬಾಕಿ ದಂಡವನ್ನು ಪಾವತಿಸಿ.
254
📱 e-Lost ಮತ್ತು e-FIR ಸೇವೆಗಳನ್ನು ಆನ್‌ಲೈನ್ ಮೂಲಕವೇ ಸದುಪಯೋಗಪಡಿಸಿಕೊಳ್ಳಿ.
🚗 ವಾಹನ ಕಳ್ಳತನದ ದೂರು: Citizen Centric Portal ಗೆ ಭೇಟಿ ನೀಡಿ.
🔗 policeseva.ksp.gov.in/
📱 ಕಳುವಾದ ಮೊಬೈಲ್ ಹಾಗೂ ಕಳೆದುಹೋದ ದಾಖಲೆಗಳ ದೂರು: KSP ಆ್ಯಪ್ ಡೌನ್‌ಲೋಡ್ ಮಾಡಿ:play.google.com/store/apps/d…
179
DISHA (District Development Coordination and Monitoring Committee) ಸಭೆಯಲ್ಲಿ ಭಾಗವಹಿಸಿ, ಜಿಲ್ಲೆಯ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಪ್ರಗತಿ, ಅನುಷ್ಠಾನ ಮತ್ತು ಸಾರ್ವಜನಿಕರಿಗೆ ಯೋಜನೆಗಳ ಪ್ರಯೋಜನ ತಲುಪಿಸುವ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಳ್ಳಲಾಯಿತು.
1
241
AI ಡೀಪ್‌ಫೇಕ್‌ಗಳು ನೈಜವೆನಿಸಬಹುದು! ಎಚ್ಚರದಿಂದಿರಿ, ಆತುರದ ನಿರ್ಧಾರ ಬೇಡ. ಯಾವುದೇ ಕರೆ ಅಥವಾ ಸಂದೇಶವನ್ನು ನಂಬುವ ಮೊದಲು ಮತ್ತೊಮ್ಮೆ ಪರಿಶೀಲಿಸಿ, ನಿಮ್ಮ ಆತ್ಮೀಯರಿಗೂ ಜಾಗೃತಿ ಮೂಡಿಸಿ.
📞 ಅನುಮಾನಾಸ್ಪದ ಕರೆಗಳು ಮತ್ತು ಸಂದೇಶಗಳನ್ನು 1930 ಸಹಾಯವಾಣಿಗೆ ವರದಿ ಮಾಡಿ.
DAR ಕೇಂದ್ರ ಸ್ಥಾನದಲ್ಲಿರುವ ಗೆಸ್ಟ್‌ಹೌಸ್, ತರಬೇತಿ ಕೊಠಡಿಗಳು ಹಾಗೂ ವಿಶ್ರಾಂತಿ ಗೃಹಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಲಾಯಿತು.
437
Dr.Suman D.Pennekar, SP Ballari retweeted
ಅಕ್ಕಪಡೆ ವತಿಯಿಂದ ಜಾಗೃತಿ ಕಾರ್ಯಕ್ರಮ.
ಮೀನಹಳ್ಳಿ ಹಾಗೂ ಸಿಡಿಗಿನಮೊಳ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ ತಡೆ, ವರದಕ್ಷಿಣೆ ಕಿರುಕುಳ ತಡೆ, ಮಹಿಳಾ ಸುರಕ್ಷತೆ, ಸೈಬರ್ ಅಪರಾಧಗಳ ತಡೆಗಟ್ಟುವಿಕೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
🚨 ಸೈಬರ್ ಅಪರಾಧ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ.
ಶ್ರೀಮತಿ ಗಾಯತ್ರಿ, ಪಿ.ಐ., ಸೈಬರ್ ಅಪರಾಧ ಪೊಲೀಸ್ ಠಾಣೆ, ರವರು ಸರಳಾದೇವಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳ ತಡೆಗಟ್ಟುವಿಕೆ, ಆನ್‌ಲೈನ್ ಹಣಕಾಸು ವಂಚನೆಗಳಿಂದ ರಕ್ಷಣೆ ಹಾಗೂ ವೈಯಕ್ತಿಕ ಮಾಹಿತಿಯ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಿದರು.
216
ಮುನಿರಾಬಾದ್‌ನ ಕೆಎಸ್‌ಆರ್‌ಪಿ (KSRP) ಮೈದಾನದಲ್ಲಿ ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ (DAR) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ (ET) ಹಾಗೂ ದೇಹದಾರ್ಢ್ಯತೆ ಪರೀಕ್ಷೆಯನ್ನು (PST) ಅತ್ಯಂತ ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸಲಾಯಿತು.
417
🏍️ ಹೆಲ್ಮೆಟ್ ಕೇವಲ ದಂಡದಿಂದ ತಪ್ಪಿಸಿಕೊಳ್ಳಲು ಅಲ್ಲ, ನಿಮ್ಮ ಅಮೂಲ್ಯ ಜೀವವನ್ನು ರಕ್ಷಿಸಲು!
ಹೆಲ್ಮೆಟ್ ಧರಿಸಿ, ಅಪಾಯವನ್ನು ತಡೆಯಿರಿ!
❤️ ನಿಮ್ಮ ಸುರಕ್ಷತೆ — ನಿಮ್ಮ ಕುಟುಂಬದ ನೆಮ್ಮದಿ.
135
CEIR ಪೋರ್ಟಲ್ ಮೂಲಕ ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ 10 ಮೊಬೈಲ್‌ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಈ ಕಾರ್ಯದಲ್ಲಿ ಶ್ಲಾಘನೀಯ ಸಾಧನೆ ಮಾಡಿದ “ಪಿಐ ರವಿಚಂದ್ರ ಡಿ.ಬಿ” ಹಾಗೂ ತಂಡಕ್ಕೆ ಅಭಿನಂದನೆಗಳು.
2
242





















