ಪುಟ್ಟ ಗೌರಿ retweeted
ಗೀತೆಯನ್ನು ಕೃಷ್ಣ ಆಗಲಿ ಅರ್ಜುನ ಆಗಲಿ ಬರೆಯಲಿಲ್ಲ
ಬೈಬಲ್ ನ ಆ ನಾಲ್ಕು ಗಾಸ್ಪೆಲ್ ಅನ್ನು ಜೀಸಸ್ ಬರೆಯಲಿಲ್ಲ
ಕುರಾನ್ ಅನ್ನು ಪ್ರವಾದಿ ಮೊಹಮ್ಮದ್ ರು ಬರೆಯಲಿಲ್ಲ
ಅವರೆಲ್ಲ ಹಂಗೆ ಹೇಳಿದ್ರು ಅಂತ ಬೇರೆ ಯಾರೋ ಸುಮಾರು ವರ್ಷಗಳ ನಂತರ ಬರೆದಿದ್ದು.
ನೆನ್ನೆ ಕೇಳಿದ ಪಾಠ ಇವತ್ತು ನೆನಪಿರಲ್ಲ ಇನ್ನು ವರ್ಷಗಳ ನಂತರ?
ಯೋಚಿಸಿ +
ಪುಟ್ಟ ಗೌರಿ retweeted
ನಾಡಗೀತೆಯಲ್ಲಿ ಕುವೆಂಪುರವರು ಮಧ್ವಾಚಾರ್ಯರ ಹೆಸರನ್ನು ಏಕೆ ಕೈಬಿಟ್ಟಿದ್ದರು ಎಂದು ಪೂರ್ಣಚಂದ್ರ ತೇಜಸ್ವಿರವರು ಸ್ಪಷ್ಟವಾಗಿ ಹೇಳಿದ್ದರೂ ಕೆಲವರನ್ನು ಓಲೈಸಲು ಮಧ್ವಾಚಾರ್ಯರ ಹೆಸರನ್ನು ಮೂಲ ಕರ್ತೃ ನಮ್ಮನ್ನು ಅಗಲಿದ ಮೇಲೆ ಸೇರಿಸಲಾಯಿತು. ಇದು ಒಂದು ಬಗೆಯ ದಬ್ಬಾಳಿಕೆ ಎಂದರೆ ತಪ್ಪಾಗಲಿಕ್ಕಿಲ್ಲ.
ಮಧ್ವಾಚಾರ್ಯರ ತತ್ವಶಾಸ್ತ್ರದಲ್ಲಿ ಶೂದ್ರರು ಮತ್ತು ಮಹಿಳೆಯರ ಆಧ್ಯಾತ್ಮಿಕ ಸ್ಥಾನಮಾನಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಕುವೆಂಪು ಸಾರಾಸಗಟಾಗಿ ಒಪ್ಪುತ್ತಿರಲಿಲ್ಲ ಎಂಬುದನ್ನ ನಾವೆಂದೂ ಮರೆಯಕೂಡದು.
ಈಗ, ಕರ್ನಾಟಕದ ರಾಜ್ಯಸರ್ಕಾರ ತೆರಿಗೆಹಣ ಪೋಲು ಮಾಡಿ ಪ್ರತೀ ವರ್ಷ ಮಧ್ವಾಚಾರ್ಯ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಮುಂದಾಗಿದೆ. ಬರೀ ಓಲೈಕೆ ರಾಜಕೀಯ ಮಾಡಿಕೊಂಡು ಕೆಲ್ಸಕ್ ಬಾರದ ಜಯಂತಿಗಳನ್ನು ಆಚರಿಸುತ್ತಾ ಇರಿ, ಅವಿವೇಕಿಗಳಾ!
ಪುಟ್ಟ ಗೌರಿ retweeted
“ಪೆಟ್ರೋಮ್ಯಾಕ್ಸ್ ಹೊತ್ತವರು”
ತಲೆಯ ಮೇಲೆ ಬಿಜಲಿನ ಕಾವು
ಹೊಟ್ಟೆಯೊಳಗೆ ಹಸಿವಿನ ಗಾವು
ಜೀವನವೆಲ್ಲ ಕುದ್ದು ಕುದ್ದು
ಆವಿಯಾಗಿ ಹೋದವರು
ನಿತ್ಯ ನಿತ್ಯ ಹೊಟ್ಟೆಯಿಂದ
ಹಸಿವನ್ನು ಹೆತ್ತವರು
ಪೆಟ್ರೋಮ್ಯಾಕ್ಸ್ ಹೊತ್ತವರು
ಇದ್ದವರು ,ಕದ್ದವರು
ಚುನಾವಣೆ ಗೆದ್ದವರು
ಇವರು ಹೊತ್ತ ಬೆಳಕಿನಲ್ಲಿ
ಲಕಲಕ ಹೊಳೆದರು
-ಜಂಬಣ್ಣ ಅಮರಚಿಂತ ಅವರ ರಚನೆ
ಪುಟ್ಟ ಗೌರಿ retweeted
ಇಂದು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ಮಾಡಿದ ವಿಧ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ತೋರಿದ ಸರ್ವಾಧಿಕಾರ ನೋಡಿ ಶಿಕ್ಷಕಿಯ ಕಣ್ಣೀರು..
#ModiGovernment #neetexam






